ಶುಕ್ರವಾರ, ಡಿಸೆಂಬರ್ 6, 2019
20 °C

ಯಾರಪ್ಪನಿಂದಲೂ ಸರ್ಕಾರ ಅಲುಗಾಡಿಸಲಾಗದು: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ (ಬೆಳಗಾವಿ ಜಿಲ್ಲೆ): ‘ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಯಾರಪ್ಪನಿಂದಲೂ ಅಲುಗಾಡಿಸಲು ಆಗುವುದಿಲ್ಲ. ಈ ಸರ್ಕಾರ ತನ್ನ ಅವಧಿ ಪೂರೈಸಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಇಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಠುಸ್ ಪಟಾಕಿ ಮಾಡಿದ್ದಾರೆ. 2 ದಿನಗಳಿಂದಲೂ ಅವರ ಬ್ಯಾಟರಿ ಲೋ ಆಗಿದೆ. ಏನೂ ಮಾತನಾಡುತ್ತಿಲ್ಲ. ಈಗ ಕುಮಠಳ್ಳಿ ಫುಲ್ ಛಾರ್ಜ್‌ ಆಗಿದ್ದಾರೆ. ಲಕ್ಷ್ಮಿಯಂತಹ ಆಟಂ ಬಾಂಬೇ ಠುಸ್ ಆಗಿದ್ದು, ಅವರಿಂದಲೇ ಏನೂ ಮಾಡಲು ಆಗಲಿಲ್ಲವೆಂದು ತಿಳಿದ ಡಿ.ಕೆ. ಶಿವಕುಮಾರ್‌ ಹುಬ್ಬಳ್ಳಿಯಿಂದಲೇ ವಾಪಸ್‌ ಆಗಿದ್ದಾರೆ’ ಎಂದು ಟೀಕಿಸಿದರು.

ಪ್ರತಿಕ್ರಿಯಿಸಿ (+)