ಮಂಗಳವಾರ, ನವೆಂಬರ್ 12, 2019
28 °C

ನಾಮಪತ್ರ ಸ್ವೀಕಾರ ಸೋಮವಾರದಿಂದ

Published:
Updated:

ಬೆಳಗಾವಿ: ‘ಜಿಲ್ಲೆಯ ಮೂರು ಮತಕ್ಷೇತ್ರಗಳ ಉಪ ಚುನಾವಣೆಗೆ ಸೋಮವಾರ(ಸೆ.23)ದಿಂದ ನಾಮಪತ್ರಗಳನ್ನು ಸ್ವೀಕರಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

‘ಗೋಕಾಕ ಕ್ಷೇತ್ರದ ನಾಮಪತ್ರಗಳನ್ನು ಗೋಕಾಕ ತಹಶೀಲ್ದಾರ್‌ ಕಚೇರಿ, ಅಥಣಿ ಹಾಗೂ ಕಾಗವಾಡ ಮತಕ್ಷೇತ್ರದ ನಾಮಪತ್ರಗಳನ್ನು ಅಥಣಿ‌ ತಹಶೀಲ್ದಾರ್ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಸ್ವೀಕರಿಸಲಾಗುವುದು. ಗೋಕಾಕಕ್ಕೆ ಐಎಎಸ್‌ ಅಧಿಕಾರಿ ಬೂಬಾಲನ್, ಅಥಣಿಗೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಮತ್ತು ಕಾಗವಾಡ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಪರಿಸರ ಅಧಿಕಾರಿ ಗೋಪಾಲಕೃಷ್ಣ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)