ಶಾಸಕ ಆನಂದ ಸಿಂಗ್‌ಗೆ ಜಾಮೀನು ರಹಿತ ವಾರಂಟ್

ಶುಕ್ರವಾರ, ಮಾರ್ಚ್ 22, 2019
24 °C

ಶಾಸಕ ಆನಂದ ಸಿಂಗ್‌ಗೆ ಜಾಮೀನು ರಹಿತ ವಾರಂಟ್

Published:
Updated:

ಬೆಂಗಳೂರು: ಬಳ್ಳಾರಿ ಜಿಲ್ಲೆಯಲ್ಲಿನ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಆನಂದ ಸಿಂಗ್ ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದೆ.

ಪ್ರಕರಣದ ಆರೋಪಿಗಳಾದ ಜನಾರ್ದನ ರೆಡ್ಡಿ, ಅಲಿಖಾನ್,  ನಾಗೇಂದ್ರ ಹಾಗೂ ಸುರೇಶ್ ಬಾಬು ಇಲ್ಲಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರಾದರು.

ಆದರೆ, ಆನಂದ ಸಿಂಗ್ ಗೈರು ಹಾಜರಾಗಿದ್ದರು.

ವಿಚಾರಣೆ ವೇಳೆ, ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕ ಆನಂದ ಸಿಂಗ್ ವಿಚಾರಣೆಗೆ ವಿನಾಯಿತಿ ನೀಡುವಂತೆ ಅವರ ಪರ ವಕೀಲರು ಅರ್ಜಿ ಸಲ್ಲಿಸಿದರು. 

"ಇತ್ತೀಚೆಗೆ ರೆಸಾರ್ಟ್‌ ನಲ್ಲಿ ನಡೆದ ಹಲ್ಲೆಯಲ್ಲಿ ಆನಂದ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಂಪ್ಲಿ ಶಾಸಕ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಈ ಹಲ್ಲೆ ಮಾಡಿದ್ದಾರೆ. ಅವರಿಗೆ ಇನ್ನೂ ಹಲವು ತಿಂಗಳ ಚಿಕಿತ್ಸೆ ಅವಶ್ಯಕತೆ ಇದೆ. ಸದ್ಯ ಆಸ್ಪತ್ರೆಯಲ್ಲಿಯೇ ಇದ್ದಾರೆ‌" ಎಂದು ಚಿಕಿತ್ಸೆ ಪಡೆಯುತ್ತಿರುವ ಕುರಿತು ವೈದ್ಯಕೀಯ ದಾಖಲೆಗಳನ್ನು ನ್ಯಾಯಾಧೀಶರಿಗೆ ನೀಡಿದರು. 

ಇದಕ್ಕೆ ಗರಂ ಆದ ನ್ಯಾಯಾಧೀಶರು, "ಹಲ್ಲೆಗೂ ಮೊದಲು ನಡೆದ ವಿಚಾರಣೆ ವೇಳೆ ಗೈರು ಹಾಜರಾಗಿರುವುದಕ್ಕೆ ಕಾರಣವೇನು" ಎಂದು ಕಿಡಿ ಕಾರಿದರು.

ಆರೋಪಿ ಜಾಮೀನು ರಹಿತ ಬಂಧನದ ವಾರಂಟ್ ಗೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !