ಬಂದ್: ಕರೆ ನೀಡಿದವರಲ್ಲೇ ಒಡಕು

7
ಸಿ.ಎಂ ಮಾತಿಗೆ ಮನ್ನಣೆ ನೀಡಿದ ಹೋರಾಟ ಸಮಿತಿ

ಬಂದ್: ಕರೆ ನೀಡಿದವರಲ್ಲೇ ಒಡಕು

Published:
Updated:

ಹುಬ್ಬಳ್ಳಿ/ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ, ಗುರುವಾರ (ಆ.2) ಈ ಭಾಗದ 13 ಜಿಲ್ಲೆಗಳಲ್ಲಿ ಬಂದ್‌ ನಡೆಸುವುದಾಗಿ ಹೇಳಿದ್ದ ಹೋರಾಟಗಾರರಲ್ಲೇ ಒಡಕು ಕಾಣಿಸಿಕೊಂಡಿದೆ.

ಈ ಭಾಗದ ಸಮಸ್ಯೆಗಳ ಬಗ್ಗೆ ಹದಿನೈದು ದಿನಗಳ ಒಳಗಾಗಿ ಸಭೆ ಕರೆದು ಚರ್ಚಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರಿಂದ ಬಂದ್‌ ಹಿಂಪಡೆಯಲಾಗಿದೆ ಎಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಬುಧವಾರ ಸಂಜೆ ಹಾವೇರಿಯಲ್ಲಿ ತಿಳಿಸಿದ್ದಾರೆ.

ಆದರೆ, ಯಾವುದೇ ಕಾರಣಕ್ಕೂ ಬಂದ್ ಹಿಂಪಡೆಯುವುದಿಲ್ಲ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಮೇ 25ರಂದು ಹುಬ್ಬಳ್ಳಿಯಲ್ಲಿ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆ
ಸಿದ್ದ ಎರಡೂ ಸಂಘಟನೆಗಳ ಈ ಮುಖಂಡರು, ಬಂದ್‌ಗೆ ಕರೆ ನೀಡಿದ್ದರು. ಇದೀಗ ಅದೇ ವಿಷಯದಲ್ಲಿ ಭಿನ್ನಮತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಹೋರಾಟಗಾರರೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ, ಅನ್ಯಾಯ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅವರ ಮಾತಿನ ಮೇಲೆ ಭರವಸೆ ಇಟ್ಟು, ಬಂದ್ ಹಿಂಪಡೆದಿರುವುದಾಗಿ ಕೋತಂಬರಿ ತಿಳಿಸಿದರು. ಆದರೆ, ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸುವುದಾಗಿ ಅವರು ಹೇಳಿದರು.

ಆದರೆ, ಬಂದ್ ನಡೆಸಿಯೇ ತೀರುವುದಾಗಿ ಹೇಳಿರುವ ಕರಿಗಾರ, ಬಸ್ ಸಂಚಾರ ತಡೆಯಲಾಗುವುದು. ಅಂಗಡಿಗಳೂ ತೆರೆದಿರುವುದಿಲ್ಲ. ಶಾಲಾ– ಕಾಲೇಜುಗಳನ್ನೂ ಬಂದ್ ಮಾಡಲಾಗುವುದು ಎಂದು ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಮಠಾಧೀಶರು ಹಾಗೂ ರೈತರು ಸೇರಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ ಅವರು, ನವೆಂಬರ್ 1ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಲಾಗುವುದು ಎಂದರು.

ಕ್ಷಮೆ ಯಾಚನೆಗೆ ಆಗ್ರಹ: ‘ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆಗೆ ತೆರಳಿದ್ದ ಸೋಮಶೇಖರ ಕೋತಂಬರಿ ಹಾಗೂ ಬಸವರಾಜ ದಿಂಡೂರ ಅವರು ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿದ ಉತ್ತರ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ ಗೋಲಶೆಟ್ಟಿ, ಬಂದ್ ಹಿಂಪಡೆಯದೇ ಹೋರಾಟಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !