7

ಸಿದ್ಧಗಂಗಾ ಮಠ: 75 ಸಾವಿರ ನೋಟ್‌ ಬುಕ್‌ ವಿತರಣೆ

Published:
Updated:

ತುಮಕೂರು: ಎಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಗೃಹೋಪಯೋಗಿ ವಸ್ತುಗಳ ಮಾರಾಟ ಬೃಹತ್ ಸಂಸ್ಥೆಯಾದ ‘ಪೈ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್’ ಸಂಸ್ಥೆ ವತಿಯಿಂದ ಶನಿವಾರ ಸಿದ್ಧಗಂಗಾಮಠದಲ್ಲಿ ಮಠದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 75 ಸಾವಿರ ನೋಟ್ ಬುಕ್ ವಿತರಣೆ ಮಾಡಲಾಯಿತು.

ಸಿದ್ಧಗಂಗಾ ಮಠದ ಅಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿ ಅವರು ಮಕ್ಕಳಿಗೆ ನೋಟ್ ಬುಕ್ ವಿತರಣೆಗೆ ಚಾಲನೆ ನೀಡಿದರು.

‘ಮಕ್ಕಳ ಶಿಕ್ಷಣಕ್ಕೆ ಉಪಯುಕ್ತವಾಗುವ ನೋಟ್ ಬುಕ್‌ಗಳನ್ನು ‘ಪೈ ಇಂಟರ್ ನ್ಯಾಶನಲ್ ಸಂಸ್ಥೆ’ಯು ವಿತರಿಸುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಕಾರ್ಯ ಮಾಡಿದೆ’ ಎಂದು ಸ್ವಾಮೀಜಿ ನುಡಿದರು.

ಪೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಜಕುಮಾರ್ ಪೈ ಮಾತನಾಡಿ, ‘ಕಳೆದ ಹತ್ತು ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಹಾಗೂ ಬೇರೆ ಜಿಲ್ಲೆಗಳಲ್ಲಿ ನೋಟ್ ಬುಕ್ ವಿತರಣೆ ಮಾಡುತ್ತ ಬಂದಿದ್ದೇವೆ’ ಎಂದರು.

ಸಿದ್ಧಗಂಗಾಮಠವು 10 ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಉಚಿತ ಶಿಕ್ಷಣ, ಊಟ, ವಸತಿ ಕಲ್ಪಿಸುತ್ತಿದೆ. ಮಠದ ಕಾರ್ಯ ಬೆಂಬಲಿಸಲು ನಮ್ಮದೊಂದು ಚಿಕ್ಕ ಕಾರ್ಯವಾಗಿದೆ’ ಎಂದರು.

ಪೈ ಸಂಸ್ಥೆಯ ಹಣಕಾಸು ನಿರ್ದೇಶಕರಾದ ಮೀನಾ ಪೈ, ಅಜಿತ್ ಕುಮಾರ್, ಉತ್ತಮ್ ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !