ರಾಯಚೂರು ಜಿಲ್ಲೆ: ಎನ್‌ಆರ್‌ಬಿಸಿ ಕಾಲುವೆ ಒಡೆದು ಅಪಾರ ಬೆಳೆ ಹಾನಿ

7

ರಾಯಚೂರು ಜಿಲ್ಲೆ: ಎನ್‌ಆರ್‌ಬಿಸಿ ಕಾಲುವೆ ಒಡೆದು ಅಪಾರ ಬೆಳೆ ಹಾನಿ

Published:
Updated:

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಂಕೇಶ್ವರಹಾಳ ಸಮೀಪ ನಾರಾಯಣಪುರ ಬಲದಂಡೆ  ಕಾಲುವೆಯ (ಎನ್‌ಆರ್‌ಬಿಸಿ) 94 ಕಿಲೋ ಮೀಟರ್‌ ಸಮೀಪ 17ನೇ ವಿತರಣಾ ಕಾಲುವೆಯು ಸೋಮವಾರ ಬೆಳಿಗ್ಗೆ ಒಡೆದು ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

40 ಎಕರೆಗಿಂತಲೂ ಹೆಚ್ಚು ಭತ್ತದ ಬೆಳೆಯಲ್ಲಿ ನೀರು ನಿಂತಿದ್ದು, ಆಲ್ದರ್ತಿ, ಜಾಡಲದಿನ್ನಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದ್ದರಿಂದ ಸಂಪರ್ಕ ಕಡಿತವಾಗಿದೆ. ಮಧ್ಯಾಹ್ನವಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳ ಬರದೆ ಇರುವುದಕ್ಕೆ ರೈತರ ಅಸಮಾಧಾನ ವ್ಯಕ್ತಪಡಿಸಿದ್ದು, ಬೆಳೆಹಾನಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

‘ಒಂದುವರೆ ಅಡಿ ಬಿಟ್ಟಿರುವ ನೀರಿನ ಒತ್ತಡಕ್ಕೆ ಕಾಲುವೆ ಎರಡು ಕಡೆಗಳಲ್ಲಿ ಒಡೆದಿದೆ. ಸುಮಾರು 40 ಅಡಿ ಕೊಚ್ಚಿಹೋಗಿದೆ. ಕಾಲುವೆ ದುರಸ್ತಿಗೆ ಅಗತ್ಯ ಸಲಕರಣೆಗಳನ್ನು ಎನ್‌ಆರ್‌ಬಿಸಿ ಎಂಜಿನಿಯರುಗಳು ಕ್ರೋಢೀಕರಿಸಿಕೊಂಡಿದ್ದು, ತ್ವರಿತವಾಗಿ ದುರಸ್ತಿ ಕೆಲಸ ಮಾಡಲಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !