ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಬಂದ್: ಖರೀದಿಯಾಗದೆ ದನಕ್ಕೆ ಮೇವಾದ ಕಬ್ಬು

ಹತಾಶ ರೈತರು ಕಬ್ಬು ಸಾಗಿಸುವುದೇ ಬೇಡ ಎಂದರು
Last Updated 23 ನವೆಂಬರ್ 2018, 7:16 IST
ಅಕ್ಷರ ಗಾತ್ರ

ಸಿರುಗುಪ್ಪ(ಬಳ್ಳಾರಿ ಜಿಲ್ಲೆ):ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆ ಒಪ್ಪಂದದ ಪ್ರಕಾರ ಕಬ್ಬು ಖರೀದಿ ಮಾಡದೇ ಇರುವುದರಿಂದ ಹತಾಶೆಗೊಂಡ ತಾಲ್ಲೂಕಿನ ಇಬ್ರಾಹಿಮಪುರ ಗ್ರಾಮದ ರೈತ ಸತ್ಯ ನಾರಾಯಣರಾವ್ ತಮ್ಮ ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ದನಗಳಿಗೆ ಮೇವಾಗಿ‌ ನೀಡುತ್ತಿದ್ದಾರೆ.

ಗುರುವಾರವಷ್ಟೇ ಉಸ್ತುವಾರಿ ‌ಸಚಿವ ಡಿ.ಕೆ.ಶಿವಕುಮಾರ್‌‌ ಬೆಳೆಗಾರರ ಸಭೆ ನಡೆಸಿ, ‌ಬೇರೆ ಕಾರ್ಖಾನೆಗಳಿಗೆ ಕಬ್ಬು ಕಳಿಸುವುದಾಗಿ‌ ಭರವಸೆ ನೀಡಿದ್ದ‌ ಬೆನ್ನಿಗೇ ಈ ಘಟನೆ ನಡೆದಿದೆ.

ನವೆಂಬರ್ 1ರ ನಂತರ ಕಬ್ಬನ್ನ ಖರೀದಿಸಿ ನುರಿಸಬೇಕಿತ್ತು‌. ಆದರೆ, ಕಾರ್ಖಾನೆಯ ಆಡಳಿತ ಮಂಡಳಿ ಕಾರ್ಖಾನೆಯನ್ನು ಬಂದ್ ಮಾಡಿದೆ. ಮನನೊಂದ ರೈತ ಕಬ್ಬು ಕಟಾವು ಮಾಡಿ ಟ್ರ್ಯಾಕ್ಟರ್‌ಚಾಲಿತ ಮಷಿನ್‌ನಲ್ಲಿ ಸಣ್ಣದಾಗಿ ತುಂಡರಿಸಿದನಕ್ಕೆ ಮೇವು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ಕಾರ್ಖಾನೆಗಳಿಂದ ಬಾಕಿ ಪಾವತಿಸುವಂತೆ ಹಾಗೂ ಹೆಚ್ಚನ ದರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರ ಕಾವು ರಾಜಧಾನಿ ಬೆಂಗಳೂರಿಗೂ ತಲುಪಿದ್ದು, ಸಿಎಂ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ್ದಾರೆ. ಬಾಕಿ ಪಾವತಿಗೆ 15 ದಿನಗಳ ಗಡುವನ್ನೂ ನೀಡಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬು ದನಗಳ ಮೇವಾಗುತ್ತಿರುವುದು ನೋವಿನ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT