ನುಡಿ 6.0 ತಂತ್ರಾಂಶ ಬಿಡುಗಡೆ

7

ನುಡಿ 6.0 ತಂತ್ರಾಂಶ ಬಿಡುಗಡೆ

Published:
Updated:

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಗಣಕ ಪರಿಷತ್‌ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ನುಡಿ 6.0 ತಂತ್ರಾಂಶವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೃಹಕಚೇರಿ ‘ಕೃಷ್ಣಾ’ದಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಉಚಿತವಾದ ಈ ತಂತ್ರಾಂಶದ ಬಳಕೆಯಿಂದ ಸರ್ಕಾರದ ಆಡಳಿತ ಇನ್ನಷ್ಟು ಸುಗಮವಾಗಲಿದ್ದು, ಜಗತ್ತಿನಾದ್ಯಂತ ಕನ್ನಡಿಗರ ಪರಸ್ಪರ ಇ–ಸಂಪರ್ಕಕ್ಕೆ ಪೂರಕವಾಗ
ಲಿದೆ. ಸರ್ಕಾರದ ಎಲ್ಲ ಅಂತರ್ಜಾಲ ತಾಣಗಳಲ್ಲಿ ಈ ತಂತ್ರಾಂಶ ಬಳಕೆಗೆ ಲಭ್ಯವಾಗಲಿದೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ, ‘ಹಿಂದಿನನುಡಿ ತಂತ್ರಾಂಶಗಳಲ್ಲಿ ಇದ್ದ ಲೋಪಗಳನ್ನು ಸರಿಪಡಿಸಲಾಗಿದೆ’ ಎಂದರು.

ಜಿ.ಪರಮೇಶ್ವರ, ಪಿ.ಟಿ.ಪರಮೇಶ್ವರ ನಾಯ್ಕ, ಹಂಪ ನಾಗರಾಜಯ್ಯ, ಕಮಲಾ ಹಂಪನಾ, ‘ಮುಖ್ಯಮಂತ್ರಿ’ ಚಂದ್ರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !