ಭಾನುವಾರ, ಡಿಸೆಂಬರ್ 8, 2019
20 °C

ಅಂಬೇಡ್ಕರ್‌ ಕುರಿತು ಅವಹೇಳನಕಾರಿ ಮಾಹಿತಿ: ನಾಲ್ವರು ಅಧಿಕಾರಿಗಳ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಶಿಕ್ಷಣ ಇಲಾಖೆ ವೆಬ್‌ಸೈಟ್‌ನಲ್ಲಿ ಅವಹೇಳನಕಾರಿ ಮಾಹಿತಿಯನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಕೆ.ಎಸ್‌.ಮಣಿ ಸಹಿತ ನಾಲ್ವರನ್ನು ಅಮಾನತು ಮಾಡಲಾಗಿದೆ.

ಈ ವಿಚಾರ ದೊಡ್ಡ ವಿವಾದವಾಗಿ ಪರಿಣಮಿಸಿದ್ದು, ನಾಲ್ವರು ಅಧಿಕಾರಿಗಳ ’ತಲೆದಂಡ’ಕ್ಕೆ ಕಾರಣವಾಗಿದೆ. ಅಮಾನತುಗೊಂಡವರಲ್ಲಿ ಒಬ್ಬರು ಉಪನಿರ್ದೆಶಕರು, ಅಧೀಕ್ಷಕ ಮತ್ತು ಗುಮಾಸ್ತ ಸೇರಿದ್ದಾರೆ.

ಸಿಎಂಸಿಎ ಸ್ವಯಂಸೇವಾ ಸಂಸ್ಥೆ ಅಂಬೇಡ್ಕರ್‌ ಅವರ ಬಗ್ಗೆ ನೀಡಿದ್ದ ಮಾಹಿತಿಯನ್ನು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಹಾಕಲಾಗಿತ್ತು. ಈ ಕುರಿತಂತೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂದಕ್ಕೆ ಪಡೆಯಲಾಗಿತ್ತು.

ಕೈಪಿಡಿಯ ಪರಿಶೀಲನೆಗೆ ತಜ್ಞರ ಸಮಿತಿ ರಚಿಸಬೇಕು. ಅವರು ನೀಡುವ ಶಿಫಾರಸಿನಂತೆ ಸುತ್ತೋಲೆಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಕ್ಟೋಬರ್ ಮೊದಲ ವಾರದಲ್ಲೇ ಲಿಖಿತ ಸೂಚನೆ ನೀಡಿದ್ದರು.

ಆದರೆ ಈ ಸೂಚನೆಯನ್ನು ಮರೆತ ಕೆಳಹಂತದ ಅಧಿಕಾರಿಗಳು ಸುತ್ತೋಲೆ ಅಪ್‌ಲೋಡ್‌ ಮಾಡಿದ್ದು ವಿವಾದ ಸೃಷ್ಟಿಸಿತು.

‘ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಈ ವಿಷಯವನ್ನು ನನ್ನ ಗಮನಕ್ಕೆ ತಂದರು. ತಕ್ಷಣ ವೆಬ್‌ಸೈಟ್‌ನಿಂದ ಈ ಸುತ್ತೋಲೆ ಹಿಂಪಡೆಯಲು ಸೂಚಿಸಿದೆ. ತನಿಖೆಗೂ ಆದೇಶಿಸಿದೆ. ತಪ್ಪು ಎಸಗಿದವರು ಯಾರೆಂಬುದು ಗೊತ್ತಾಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢ  ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್‌.ಉಮಾಶಂಕರ್‌ ಸ್ಪಷ್ಟಪಡಿಸಿದ್ದಾರೆ. 

ಪ್ರತಿಕ್ರಿಯಿಸಿ (+)