ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಲಾ ಕಂಪನಿ ಪರವಾನಗಿ ರದ್ದು

Last Updated 22 ಮಾರ್ಚ್ 2019, 11:56 IST
ಅಕ್ಷರ ಗಾತ್ರ

ಬೆಂಗಳೂರು:ಓಲಾ ಬುಕ್ ಮಾಡುವ ಮುನ್ನ ಈ ವರದಿಯನ್ನು ಓದಿ.

‘ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ವೆಬ್‌ ತಂತ್ರಜ್ಞಾನ, ಅಗ್ರಿಗೇಟರ್‌ ಅಧಿನಿಯಮ-2016’ರನಿಯಮ ಉಲ್ಲಂಘಿಸಿದ್ದಕ್ಕಾಗಿ ಓಲಾ ಕಂಪನಿಯ ಪರವಾನಗಿಯನ್ನು ಸಾರಿಗೆ ಇಲಾಖೆ ರದ್ದುಪಡಿಸಿದೆ.

ಆ ಸಂಬಂಧ ಮಾ. 18ರಂದು ಆದೇಶ ಹೊರಡಿಸಿರುವ ಸಾರಿಗೆ ಆಯುಕ್ತರು, ರದ್ದು ಆದೇಶ ಸ್ವೀಕರಿಸಿದ ದಿನಾಂಕದಿಂದ ಮೂರು ದಿನದೊಳಗೆ ಪರವಾನಗಿಯನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸುವಂತೆ ಹಾಗೂ ತಕ್ಷಣವೇ ಆ್ಯಪ್ ಆಧಾರಿತ ಬೈಕ್ಟ್ಯಾಕ್ಸಿ ಸೇವೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದೆ.

ಅನಿ ಟೆಕ್ನಾಲಜೀಸ್ ಕಂಪನಿ ಹೆಸರಿನಲ್ಲಿ ಓಲಾ ಕಂಪನಿಗೆ 2021ರವರೆಗೆ ಪರವಾನಗಿ ನೀಡಲಾಗಿತ್ತು. ಟ್ಯಾಕ್ಸಿಗಳನ್ನು ಓಡಿಸಲು ಮಾತ್ರ ಅನುಮತಿ ಇತ್ತು. ಆದರೆ, ಕಂಪನಿಯು ಬೈಕ್ ಟ್ಯಾಕ್ಸಿ ಆರಂಭಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದೆ. ಹೀಗಾಗಿಮುಂದಿನ ಆರು ತಿಂಗಳ ಅವಧಿಯವರೆಗೆ ಪರವಾನಗಿ ರದ್ದುಪಡಿಸಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.

ಆದೇಶ ಹೊರಬಿದ್ದು ಆರು ದಿನಗಳಾಗಿದ್ದು, ಇದುವರೆಗೂ ಓಲಾ ಕಂಪನಿಯು ತನ್ನ ಸೇವೆಯನ್ನು ಸ್ಥಗಿತಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT