ಎಂದಿನಂತೆ ಮುಂದುವರಿಯಲಿದೆ ಓಲಾ‌ ಕಂಪನಿ ಸೇವೆ

ಮಂಗಳವಾರ, ಏಪ್ರಿಲ್ 23, 2019
31 °C
ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯಪ್ರವೇಶ * ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್

ಎಂದಿನಂತೆ ಮುಂದುವರಿಯಲಿದೆ ಓಲಾ‌ ಕಂಪನಿ ಸೇವೆ

Published:
Updated:

ಬೆಂಗಳೂರು: ಮೊಬೈಲ್‌ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ ಓಲಾ ಕಂಪನಿ ಪರವಾನಗಿ ಅಮಾನತು ಆದೇಶ ಹಿಂಪಡೆಯಲು ಸರ್ಕಾರ ತೀರ್ಮಾನಿಸಿದ್ದು, ಆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

'ಇಂದಿನಿಂದ ಎಂದಿನಂತೆ ಓಲಾ‌ ಕಂಪನಿ ಕ್ಯಾಬ್‌ಗಳು ಓಡಾಡಲಿವೆ. ಆದಾಗ್ಯೂ, ನೀತಿಗಳನ್ನು ಹೊಸ ತಂತ್ರಜ್ಞಾನದೊಂದಿಗೆ ತುರ್ತಾಗಿ  ಬದಲಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಜೊತೆಗೆ ಸರ್ಕಾರಗಳು ಹೊಸ ನೀತಿಗಳನ್ನು ಜಾರಿಗೊಳಿಸಲು ಕೈಗಾರಿಕೆಗಳೂ ಸರ್ಕಾರದೊಟ್ಟಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಸಚಿವರು ಟ್ವೀಟ್‌ ಮಾಡಿದ್ದಾರೆ.

ಹೀಗಾಗಿ ಓಲಾ ಕಂಪನಿ ಕ್ಯಾಬ್‌ ಹಾಗೂ ಆಟೋಗಳು ಎಂದಿನಂತೆ ಓಡಾಟ ನಡೆಸಲಿವೆ.

ಸಾರಿಗೆ ಇಲಾಖೆಯು ಕಂಪೆನಿ ಪರವಾನಗಿಯನ್ನು ಮುಂದಿನ ಆರು ತಿಂಗಳವರೆಗೆ ಅಮಾನತು ಮಾಡಿದ್ದರಿಂದ ನಗರದಲ್ಲಿ ಓಲಾ ಕ್ಯಾಬ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಜೊತೆಗೆ ಪ್ರತಿಸ್ಪರ್ಧಿ ಕಂಪನಿಗಳ ಕ್ಯಾಬ್‌ ಬಳಕೆ ಹೆಚ್ಚಳವಾಗಿತ್ತು.

ಮುಖ್ಯ ಕಾರ್ಯದರ್ಶಿಗೆ ಓಲಾ ಕಂಪನಿ ಪರವಾನಗಿ ವಿಚಾರ ಗಮನಿಸುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಇನ್ನಷ್ಟು ಸುದ್ದಿಗಳು
ಓಲಾ ಕಂಪನಿ ಪರವಾನಗಿ ರದ್ದು
ಲೈಸೆನ್ಸ್‌ ಅಮಾನತ್ತಾದರೂ ನಿಲ್ಲದ ಓಲಾ ಸೇವೆ
‘ಓಲಾ’ ವ್ಯತ್ಯಯ; ಹೆಚ್ಚಿದ ‘ಉಬರ್’ ಬಳಕೆ

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 6

  Angry

Comments:

0 comments

Write the first review for this !