ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 39 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಫ್ಯೂಚರ್‌ ಮೆಟಲ್ಸ್‌ ಸಂಸ್ಥೆಯಿಂದ ಹಣಕಾಸು ವಂಚನೆ
Last Updated 4 ಏಪ್ರಿಲ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯೂಚರ್‌ ಮೆಟಲ್ಸ್‌ ಸಂಸ್ಥೆಗೆ ಸೇರಿದ ₹ 39 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ.

ಸರ್ಕಾರಿ ಸ್ವಾಮ್ಯದ ಎಸ್‌ಟಿಸಿಎಲ್‌ ಸಂಸ್ಥೆಗೆ ವಂಚಿಸಿದ ಆರೋಪದ ಮೇಲೆ ಫ್ಯೂಚರ್‌ ಮೆಟಲ್ಸ್‌ ಸಂಸ್ಥೆಯ ಮಾಲೀಕರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದ ನವದೆಹಲಿಯ ಸಿಬಿಐ ಕಚೇರಿ, ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಇ.ಡಿ.ಗೆ ವಹಿಸಲಾಗಿತ್ತು. 

ಸಂಸ್ಥೆಯ ಮಾಲೀಕರಾದ ನವೀನ್‌ ಶ್ರೀರಾಮ್‌ ಮತ್ತು ಸುಧೀರ್‌ ಶ್ರೀರಾಮ್‌ ಸೇರಿ ₹ 1,208 ಕೋಟಿ ಅಕ್ರಮ ವರ್ಗಾವಣೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಈ ಹಣವನ್ನು ಬಳಸಿ ಅವರಿಬ್ಬರೂ ಕುಟುಂಬ ಸದಸ್ಯರು ಹಾಗೂ ಸಂಸ್ಥೆಯ ಹೆಸರುಗಳಲ್ಲಿ ಪಂಜಾಬ್‌ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಜಮೀನು ಖರೀದಿಸಿದ್ದರು. ಈ ಆಸ್ತಿಗಳ ನೋಂದಾಯಿತ ಮೌಲ್ಯ ₹ 39 ಕೋಟಿ. ತನಿಖೆ ಮುಂದುವರಿದಿದೆ ಎಂದು ಇ.ಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT