ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಣಂ: ‘ದಗ್ಗಿಳ್ಳಿಕಾಯಿ’ಗೆ ಹೆಚ್ಚಿದ ಬೇಡಿಕೆ

ಪ್ರತಿ 20 ಕೆ.ಜಿ ತೂಕದ ಚೀಲಕ್ಕೆ ₹ 800 ಧಾರಣೆ
Last Updated 11 ಸೆಪ್ಟೆಂಬರ್ 2019, 7:31 IST
ಅಕ್ಷರ ಗಾತ್ರ

ಶನಿವಾರಸಂತೆ: ‘ಓಣಂ’ ಹಬ್ಬದ ಅಂಗವಾಗಿ ಇಲ್ಲಿನ ಮಾರುಕಟ್ಟೆಯಲ್ಲಿ ಸಂತೆಯ ದಿನ ‘ದಗ್ಗಿಳ್ಳಿಕಾಯಿ’ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಹಬ್ಬದ ಸಂದರ್ಭದಲ್ಲಿ ನೆರೆಯ ಕೇರಳ ರಾಜ್ಯದಲ್ಲಿ ಈ ಕಾಯಿಗೆ ಹೆಚ್ಚಿನ ಬೇಡಿಕೆಯಿದ್ದು ವ್ಯಾಪಾರಿಗಳು ಮುಗಿಬಿದ್ದು ಖರೀದಿಸಿದರು.

ಮಳೆಯ ಕಾರಣ ಈ ವಾರ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಕಾಯಿ ಪೂರೈಕೆ ಆಗಿದ್ದರಿಂದ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಪ್ರತಿ 20 ಕೆ.ಜಿ ತೂಕದ ಚೀಲಕ್ಕೆ ₹ 800 ಧಾರಣೆಯಿತ್ತು. ಉತ್ತಮ ಬೆಲೆ ಬಂದಿದ್ದರಿಂದ ರೈತರು ಸಂತಸಗೊಂಡಿದ್ದರು. ಸಂತೆಯಲ್ಲಿ ವ್ಯಾಪಾರಿಗಳು ನೂರಾರು ಚೀಲ ದಗ್ಗಿಳ್ಳಿಕಾಯಿ ಖರೀದಿಸಿದ ದೃಶ್ಯ ಕಂಡು ಬಂದಿತು.

1 ಕೆ.ಜಿ ಕಾಯಿಗೆ ₹ 40 ದರವಿತ್ತು. ಒಂದು ಕೆ.ಜಿಗೆ 1ರಿಂದ 2 ಕಾಯಿ ಮಾತ್ರ ತೂಗುತ್ತವೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಜಾನೆಯೇ ಮಾರುಕಟ್ಟೆಗೆ ಕಾಯಿ ತಂದಿದ್ದರು. ತೋಟ, ಮನೆಯ ಹಿತ್ತಲಿನಲ್ಲಿ ಬೆಳೆಯುವ ದಗ್ಗಿಳ್ಳಿಕಾಯಿಗೆ ಮಡಿಕೇರಿ ವ್ಯಾಪ್ತಿಯಲ್ಲಿ ‘ಬಂಡುಳ್ಳಿ’ ಎಂದು ಕರೆದರೆ ಕೇರಳದಲ್ಲಿ ‘ಕರ್ ನಾರಂಗ’ , ‘ಬಡುವಪುಳಿ’ ಎಂಬ ಹೆಸರಿದೆ.

‘ಉಳಿದ ದಿನಗಳಲ್ಲಿ ಕೆ.ಜಿ ಲೆಕ್ಕದಲ್ಲಿ ಮಾರಾಟವಾಗುತ್ತದೆ. ಇಲ್ಲಿ ಖರೀದಿಸುವ ದಗ್ಗಿಳ್ಳಿಕಾಯಿ ಕೇರಳ, ತಲಪಾಡಿ, ಕೊಟ್ಟಾಯಂ, ಅಲ್ವೆ, ಮಾನಂದವಾಡಿ, ಬಡುಕೆರೆ, ಕೊಯಮತ್ತೂರು ಸೇರಿದಂತೆ ಇತರೆಡೆಗೆ ರವಾನೆಯಾಗುತ್ತದೆ’ ಎಂದು ವ್ಯಾಪಾರಿ ಮಹಮ್ಮದ್ ಖಾನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT