ಸುರೇಶ್‌ಕುಮಾರ್‌ ಪ್ರಕಾರ ಈ ಕಾರು ನೋಡಿದರೆ ಸಾರಿಗೆ ಇಲಾಖೆಗೆ ಶಾಕ್ ಆಗುತ್ತೆ

7
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಫಲಕ ಇದ್ದ ಕಾರು

ಸುರೇಶ್‌ಕುಮಾರ್‌ ಪ್ರಕಾರ ಈ ಕಾರು ನೋಡಿದರೆ ಸಾರಿಗೆ ಇಲಾಖೆಗೆ ಶಾಕ್ ಆಗುತ್ತೆ

Published:
Updated:
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಫಲಕ ಹೊತ್ತ ಕಾರು

ಬೆಂಗಳೂರು: ಮುಂದೆ ಹಳದಿ, ಹಿಂದೆ ಬಿಳಿ ಬಣ್ಣದ ನಂಬರ್‌ ಪ್ಲೇಟ್ ಇರುವ ಕಾರಿನ ಚಿತ್ರಗಳನ್ನು ಶಾಸಕ ಎಸ್. ಸುರೇಶ್‌ಕುಮಾರ್‌ ಸೋಮವಾರ ಸಂಜೆ 4 ಗಂಟೆಗೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸಾರಿಗೆ ಇಲಾಖೆಯ ಆ್ಯಪ್ ಮೂಲಕ ಕಾರಿನ ವಿವರ ಕೆದಕುತ್ತಿರುವ ನೆಟ್ಟಿಗರು ಕಾರಿನ ಮಾಹಿತಿಯ ಸ್ಕ್ರೀನ್‌ಶಾಟ್ ಹಂಚಿಕೊಳ್ಳುತ್ತಿದ್ದಾರೆ. ಈ ಸ್ಕ್ರೀನ್‌ಶಾಟ್‌ಗಳ ಪ್ರಕಾರ ‘ಕೆಎ02 ಎಂಕೆ 9394’ ಸಂಖ್ಯೆಯ ಈ ಮರ್ಸಿಡಿಜ್ ಬೆಂಜ್ ಕಾರು ‘ಗುಡ್‌ವಿಲ್ ಹೌಸಿಂಗ್ ಲಿಮಿಟೆಡ್’ ಮಾಲೀಕತ್ವದಲ್ಲಿ ನೋಂದಣಿಯಾಗಿದೆ.

‘ಒಂದೇ ಕಾರು, ಒಂದೇ ನಂಬರ್. ಆದರೆ ವ್ಯತ್ಯಾಸವೆಂದರೆ ಹಿಂದೆ ಬ್ಲಾಕ್ ಅಂಡ್ ವೈಟ್ ನಂಬರ್‌ ಪ್ಲೇಟ್. ಮುಂದೆ ಹಳದಿ ಬಣ್ಣದ ನಂಬರ್ ಪ್ಲೇಟ್’ ಎಂದು ಸುರೇಶ್‌ಕುಮಾರ್ ತಮ್ಮ ಪೋಸ್ಟ್‌ನಲ್ಲಿ ಒಕ್ಕಣೆ ಬರೆದಿದ್ದಾರೆ.

ಕಾರಿನ ಹಿಂದೆ ‘GOVT.OF KARNATAKA’ ಎಂಬ ಉಲ್ಲೇಖವಿದ್ದರೆ, ಮುಂದೆ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಎಂಬ ಫಲಕವಿದೆ. ‘ಕುಮಾರಕೃಪ ಮುಂದೆ ಈ ಕಾರು ನಿಂತಿತ್ತು’ ಎಂದು ಸುರೇಶ್‌ಕುಮಾರ್ ಅವರ ಪೋಸ್ಟ್ ಹೇಳುತ್ತದೆ.

‘ಕಾರು ಚಾಲಕನನ್ನು ಈ ಕಾರು ಯಾರಿಗೆ ಸೇರಿದ್ದೆಂದು ಕೇಳಿದಾಗ ಸಿಕ್ಕ ಉತ್ತರ ನನ್ನ ಪತ್ರಕರ್ತ ಗೆಳೆಯರಿಗೆ ‘ಶಾಕ್’ ನೀಡಿತು. ಸಾರಿಗೆ ಇಲಾಖೆಯವರೇ ಇದಕ್ಕೆ ಉತ್ತರ ಕೊಡಬೇಕು. ಆಗ ಎಲ್ಲರಿಗೂ (ಸಾರಿಗೆ ಇಲಾಖೆಯವರಿಗೂ ಸೇರಿದಂತೆ) ಶಾಕ್ ಗ್ಯಾರಂಟಿ’ ಎಂದು ಹೇಳಿರುವ ಸುರೇಶ್‌ ಕುಮಾರ್, ‘ಇದು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ. ‘ಸಾರಿಗೆ ಇಲಾಖೆಯ ಉತ್ತರಕ್ಕೆ ಕಾಯುತ್ತಿದ್ದೇನೆ’ ಎಂದು ಫೇಸ್‌ಬುಕ್ ಬರಹ ಮುಗಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 24

  Happy
 • 4

  Amused
 • 0

  Sad
 • 1

  Frustrated
 • 6

  Angry

Comments:

0 comments

Write the first review for this !