ಬುಧವಾರ, ಅಕ್ಟೋಬರ್ 23, 2019
27 °C

₹ 60 ಲಕ್ಷ ಸಾಲ ಕೊಡುವುದಾಗಿ ₹ 24 ಲಕ್ಷ ವಂಚನೆ!

Published:
Updated:

ಕಾರವಾರ: ಹೊಸದಾಗಿ ವ್ಯವಹಾರ ಆರಂಭಿಸಲು ₹ 60 ಲಕ್ಷ ಸಾಲ ಸಿಗುವ ವಿಶ್ವಾಸದಲ್ಲಿದ್ದ ವ್ಯಕ್ತಿಯೊಬ್ಬರು ₹ 24 ಲಕ್ಷ ಕಳೆದುಕೊಂಡಿದ್ದಾರೆ.

ಯಲ್ಲಾಪುರ ತಾಲ್ಲೂಕಿನ ಹಿಟ್ಟಳ್ಳಿಯ ವಿಘ್ನೇಶ್ವರ ಹೆಗಡೆ ಎಂಬುವವರು ಆನ್‌ಲೈನ್ ಮಾರ್ಕೆಟಿಂಗ್ ಸಂಸ್ಥೆ ಆರಂಭಿಸಲು ಹಣಕಾಸಿನ ನೆರವಿಗೆ ಹುಡುಕಾಡುತ್ತಿದ್ದರು. ಈ ಸಂಬಂಧ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ www.capitalmorganfinancial.com ಎಂಬ ವೆಬ್‌ಸೈಟ್ ವಿಳಾಸ ಕಾಣಿಸಿತು. ಅದರಲ್ಲಿದ್ದ ಡೇವಿಡ್ ಪ್ಯಾಟ್ರಿಕ್ ಎಂಬಾತನ ಮೊಬೈಲ್ ಸಂಖ್ಯೆಯಿತ್ತು. ಆತನಿಗೆ ಕರೆ ಮಾಡಿದಾಗ, ತನ್ನನ್ನು ಕಂಪನಿಯ ನಿರ್ದೇಶಕ ಎಂದು ಪರಿಚಯಿಸಿಕೊಂಡ. ತಮಗೆ ಹಣಕಾಸಿನ ಅವಶ್ಯಕತೆ ಇರುವ ಬಗ್ಗೆ ವಿಘ್ನೇಶ್ವರ ಹೆಗಡೆ ಆತನ ಬಳಿ ನಿವೇದಿಸಿಕೊಡರು.

ಡೇವಿಡ್ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯು ಅಮೆರಿಕ ಮೂಲದ್ದಾಗಿದೆ. ₹ 60 ಲಕ್ಷ ಸಾಲ ಕೊಡಿಸಲು ಸಾಧ್ಯವಿದೆ. ಹಣ ವರ್ಗಾವಣೆ ಮಾಡುವ ವಿವಿಧ ಪ್ರಕ್ರಿಯೆಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಕತೆ ಕಟ್ಟಿದ್ದ. ಆ ಶುಲ್ಕ ಈ ಶುಲ್ಕ ಎಂದು ನಂಬಿಸಿ  ನಮ್ಮ ದೇಶದ ವಿವಿಧೆಡೆ ಇರುವ ಬ್ಯಾಂಕ್ ಖಾತೆಗಳಿಗೆ ಒಟ್ಟು ₹ 24 ಲಕ್ಷವನ್ನು ಜಮಾ ಮಾಡಿಸಿಕೊಂಡ. ಆದರೆ, ಸಾಲವನ್ನೂ ಕೊಡಲಿಲ್ಲ, ಜಮೆ ಮಾಡಿಸಿಕೊಂಡ ಹಣವನ್ನೂ ಮರಳಿಸಿಲ್ಲ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ. ಇಲ್ಲಿನ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)