ಬುಧವಾರ, ನವೆಂಬರ್ 13, 2019
21 °C

ಬಿಎಸ್‌ವೈ ಪ್ರಕರಣ: ವಿಚಾರಣೆ 26ಕ್ಕೆ

Published:
Updated:

ಕಲಬುರ್ಗಿ: ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಪುತ್ರ ಶರಣಗೌಡ ಅವರಿಗೆ ಬಿ.ಎಸ್‌. ಯಡಿಯೂರಪ್ಪ ಅವರು ‘ಆಪರೇಶನ್‌ ಕಮಲ’ಕ್ಕಾಗಿ ಆಮಿಷ ಒಡ್ಡಿದ್ದಾರೆ ಎಂಬ ಆರೋಪ ಕುರಿತು ದೇವದುರ್ಗ ‍ಪೊಲೀಸ್‌ ಠಾಣೆಯಲ್ಲಿ ದಾಖಲಾದ ಆಡಿಯೊ ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಸೆ.26ಕ್ಕೆ ಮುಂದೂಡಿತು.

ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂ ಗೌಡ, ಪತ್ರಕರ್ತ ಎಂ.ಬಿ.ಮರಮಕಲ್‌ ವಿರುದ್ಧ ಶರಣಗೌಡ ದೂರು ದಾಖಲಿಸಿದ್ದರು.

ಪ್ರತಿಕ್ರಿಯಿಸಿ (+)