ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಪರೇಷನ್‌’ ಮಾಡಿಸೋಕೆ ಚೌಕಿದಾರ ಮೋದಿಗೆ ಇಷ್ಟು ಹಣ ಎಲ್ಲಿಂದ ಬರುತ್ತೆ?

Last Updated 18 ಜನವರಿ 2019, 14:40 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಶಾಸಕರು ಕಾಣೆಯಾದ ದಿನದಿಂದ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಆಪರೇಷನ್‌ ಕಮಲ, ರೆಸಾರ್ಟ್‌ ರಾಜಕಾರಣ ಎಲ್ಲರ ಕಣ್ಣುಗಳನ್ನು ಅರಳಿಸಿದೆ. ಅದೆಲ್ಲದಕ್ಕೂ ಫುಲ್‌ಸ್ಟಾಪ್‌ ಇಡುವ ಶುಕ್ರವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಸಾಕಷ್ಟು ಕುತೂಹಲವನ್ನು ಉಂಟುಮಾಡಿತ್ತು.

ಈ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾಂಗ್ರೆಸ್‌ ತನ್ನ ಸಂಖ್ಯಾ ಬಲವನ್ನು ಪ್ರದರ್ಶಿಸಿ ಸರ್ಕಾರ ಉಳಿಸಿಕೊಳ್ಳಬೇಕಿದ್ದರಿಂದ ಕಾಂಗ್ರೆಸ್‌ನ ಎಷ್ಟು ಶಾಸಕರು ಈ ಸಭೆಗೆ ಹಾಜರಾಗುತ್ತಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. 80 ಶಾಸಕರಲ್ಲಿ 76 ಮಂದಿಯಷ್ಟೇ ಸಭೆಯಲ್ಲಿ ಕಾಣಿಸಿಕೊಂಡು ಮೈತ್ರಿ ಸರ್ಕಾರದ ಪರ ಬೆಂಬಲ ಸೂಚಿಸಿದರು.

ಸಭೆಯ ನಂತರ ವಿಧಾನಸೌಧದಲ್ಲಿಭಾರಿ ಗರಂ ಆಗಿ ಮಾತನಾಡಿದಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಾತುಕತೆ ಇಲ್ಲಿದೆ ಓದಿ...

1. ಮೈತ್ರಿ ಸರ್ಕಾರ ಪತನ ಆಗುವುದೇ?

ಸರ್ಕಾರ ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಅಂತ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಿದೆ.ಕೆಲವರು‌ ಮುಂಬೈಗೆ ಹೋಗಿದಾರೆ ಅಂತಲೂ ಹೇಳ್ತಿದ್ದಾರೆ.ಇದೆಲ್ಲ ಸುಳ್ಳು. ಬಿಜೆಪಿಯವರೆ ಈ ಸುದ್ದಿಗನ್ನು ಹರಿಬಿಡ್ತಿದ್ದಾರೆ

2. ನಾಪತ್ತೆ ಆಗಿರುವ ಶಾಸಕರ ಬಗ್ಗೆ ಏನು ಕ್ರಮಕೈಗೊಳ್ತೀರಾ?

ನಾಲ್ವರು ಶಾಸಕರು ಏನು ಕಾರಣ ಕೊಡ್ತಾರೆ ಅಂತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.

3. ಆಪರೇಷನ್ ಕಮಲ ಬಗ್ಗೆ ಏನು ಹೇಳ್ತೀರಾ?

ಬಿಜೆಪಿಯವರು ದೊಡ್ಡ ಹುನ್ನಾರ ನಡೆಸ್ತಿದಾರೆ.ಅವರಿಗೆ ಎರಡು ಮೂರು ಸಲ ಮುಖಭಂಗ ಆಗಿದೆ.ಆದರೂ ಅವರು ಪ್ರಜಾಪ್ರಭುತ್ವದ ವಿರುದ್ಧ ಸಾಗುತ್ತಿದ್ದಾರೆ.ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ.

4. ಲೋಕಸಭೆಗೆ ಸಿದ್ಧತೆ ಎನ್ನುವ ಯಡಿಯೂರಪ್ಪ ಮಾತಿನ ಬಗ್ಗೆ...

ಲೋಕಸಭೆ ಚುನಾವಣೆ ಸಿದ್ಧತೆ ಮಾಡ್ತಿದೀವಿ ಅನ್ನುವಯಡಿಯೂರಪ್ಪ ಅವರ ಮಾತು ನಿಜವಾಗಿದ್ರೆ,ಗುರುಗ್ರಾಮದಲ್ಲಿ‌ಅವರೆಲ್ಲ ಏಕೆ ಇರಬೇಕು.ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರ ಬೆಂಬಲ ಇದೆ. ಮೈತ್ರಿ ಸರ್ಕಾರ ಉರುಳಿಸಲು ಕೇಂದ್ರದ ಬಿಜೆಪಿ ‌ನಾಯಕರು ಕೈಜೋಡಿಸಿದ್ದಾರೆ.

5. ಬಿಜೆಪಿಗೆ ಸೋಲುವ ಭೀತಿ ಕಾಡುತ್ತಿದ್ದೆಯಾ?

ಬಿಜೆಪಿಯವರೇ ಆಂತರಿಕ ಸಮೀಕ್ಷೆಮಾಡಿಸಿದ್ದಾರೆ.ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಮೂರು ಸೀಟ್ ಮಾತ್ರ ಗೆಲ್ಲಲಿದೆ ಎಂಬುದು ಅದರಿಂದ ತಿಳಿದು ಬಂದಿದೆ.ಹಾಗಾಗಿ ಲಜ್ಜೆ ಗೆಟ್ಟು ಸರ್ಕಾರ ಬೀಳಿಸಲು ಮುಂದಾಗಿದ್ದಾರೆ.

6. ಕಾಂಗ್ರೆಸ್‌ ಶಾಸಕರಲ್ಲಿ ಒಗ್ಗಟ್ಟಿನ ಕೊರತೆ ಇದೆಯೇ?

ನಮ್ಮ‌ ಎಲ್ಲಾ ಶಾಸಕರು ಒಟ್ಟಿಗಿದ್ದಾರೆ. ನಮ್ಮಲ್ಲಿ ಒಗ್ಗಟ್ಟು ಇದೆ.ಬಿಜೆಪಿಯವರ ಕೋಟಿ ಕೋಟಿ ಹಣದ ಆಮಿಷಕ್ಕೆ ನಮ್ಮವರು ಬಲಿಯಾಗಲ್ಲ.ಚೌಕಿದಾರ ಮೋದಿಗೆ ಇಷ್ಟುಹಣ ಎಲ್ಲಿಂದ ಬರುತ್ತೆ ಅಂತ ಗೊತ್ತಿಲ್ಲ.

7. ಯಾರಿಗೆಲ್ಲಾ ಬಿಜೆಪಿಯಿಂದ ಆಮಿಷ ಬಂದಿದೆ?

ಅಂಜಲಿ ಲಿಂಬಾಳ್ಕರ್, ರಾಮಪ್ಪ, ಶಿವರಾಮ್ಹೆಬ್ಬಾರ್, ಶಿವಳ್ಳಿ ಮುಂತಾದವರಿಗೆ ಬಿಜೆಪಿಯಿಂದ ಆಮಿಷ ಬಂದಿದೆ.

8. ಆಪರೇಷನ್‌ ಕಮಲದ ಭಯದಿಂದ ರೆಸಾರ್ಟ್‌ಗೆ ಹೋಗುತ್ತಿದ್ದೀರಾ?

ಆಪರೇಷನ್ ಕಮಲ ಭಯ ನಮಗಿಲ್ಲ. ಲೋಕಸಭೆ ಚುನಾವಣೆ ಸಿದ್ಧತೆ ಹಾಗೂ ರಾಜ್ಯದಲ್ಲಿನ ಬರದ ಕುರಿತು ಚರ್ಚಿಸಲು ರೆಸಾರ್ಟ್‌ಗೆ ಹೋಗ್ತಿದೀವಿ.ಬಿಜೆಪಿಯವರ ಮುಂದಿನ ತಂತ್ರಗಳನ್ನು ಎದುರಿಸಬೇಕಲ್ಲ

9. ಯಾವ ರೆಸಾರ್ಟ್‌?

ನಿಮಗೆ ಹೇಳಿ ಯಾವ ರೆಸಾರ್ಟ್ ಅಂತ ತೀರ್ಮಾನಿಸಬೇಕಾ?ಆಮೇಲೆ ಹೇಳ್ತೀವಿ.

10. ರೆಸಾರ್ಟ್‌ ವಾಸ ಎಷ್ಟು ದಿನ?

ಅಗತ್ಯ ಇದ್ದಷ್ಟು ದಿನ ರೆಸಾರ್ಟ್‌ನಲ್ಲಿಇರುತ್ತೀವಿ.ಬಿಜೆಪಿಯವರು ನಮ್ಮ ಶಾಸಕರಿಗೆ ಹಿಂಸೆ ಕೊಡ್ತಿದಾರೆ. ಬ್ಯಾಗ್ ಹಿಡ್ಕೊಂಡ್ ಬಂದು ತಗೋ ತಗೋ ಅಂತ ಹಣದ ಆಮಿಷ ಕೊಡ್ತಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟಿಗಿರಲು ಹೋಗುತ್ತಿದ್ದೇವೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT