ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ವ್ಯಾಪಾರಿಗಳ ಗ್ರಾಮ ಪ್ರವೇಶಕ್ಕೆ ವಿರೋಧ

ಮಂಗಳೂರು: ಕೋವಿಡ್‌ ಕುರಿತ ಸುಳ್ಳು ಮಾಹಿತಿ ಪರಿಣಾಮ
Last Updated 7 ಏಪ್ರಿಲ್ 2020, 19:57 IST
ಅಕ್ಷರ ಗಾತ್ರ

ಮಂಗಳೂರು: ಮುಸ್ಲಿಮರಿಂದಲೇ ಕೊರೊನಾ ಸೋಂಕು ಹರಡುತ್ತಿದೆ ಎಂಬ ಸುಳ್ಳು ಮಾಹಿತಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು, ಕೊಲ್ಯ, ಮಂಗಳೂರಿನ ಅಳಪೆ ಸೇರಿದಂತೆ ಜಿಲ್ಲೆಯ ಹಲವೆಡೆ ಮುಸ್ಲಿಂ ವ್ಯಾಪಾರಿಗಳು ಗ್ರಾಮ ಪ್ರವೇಶಿಸದಂತೆ ಫಲಕ ಅಳವಡಿಸಲಾಗಿದೆ.

ಸೋಂಕು ಹರಡುವಿಕೆ ಕುರಿತು ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧ ನಿಂದನೆ ಮತ್ತು ಪ್ರಚೋದನ
ಕಾರಿ ಬರಹಗಳನ್ನು ಹರಿಯಬಿಡಲಾಗಿತ್ತು. ಈ ಬಗ್ಗೆ ದೂರು ದಾಖಲಿಸಿದ್ದ ಪೊಲೀಸರು, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರು. ಆದರೆ, ಭಾನುವಾರದಿಂದ ವಿವಿಧೆಡೆ ಬಹಿರಂಗವಾಗಿಯೇ ಫಲಕಗಳನ್ನು ಹಾಕಲಾಗಿದೆ.

‘ಊರಿನ ಹಿತದೃಷ್ಟಿಯಿಂದ ಕೊರೊನಾ ವೈರಸ್‌ ಸಂಪೂರ್ಣವಾಗಿ ಹೋಗುವವರೆಗೆ ನಮ್ಮ ಊರಿಗೆ ಯಾವುದೇ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶವಿಲ್ಲ’ ಎಂದು ಬರೆಯಲಾಗಿರುವ ಫಲಕಗಳನ್ನು ತೊಕ್ಕೊಟ್ಟು ಕೃಷ್ಣನಗರ, ಎರಡನೇ ಕೊಲ್ಯ ಹಾಗೂ ಮಂಗಳೂರು ನಗರದ ವ್ಯಾಪ್ತಿಯ ಅಳಪೆಯಲ್ಲಿ ಹಾಕಲಾಗಿದೆ.

ತೊಕ್ಕೊಟ್ಟು ಕೃಷ್ಣನಗರ ಮತ್ತು ಎರಡನೇ ಕೊಲ್ಯದಲ್ಲಿ ‘ಹಿಂದೂ ಬಾಂಧವರು’ ಎಂಬ ಹೆಸರಿನಲ್ಲಿ ಫಲಕಗಳನ್ನು ಹಾಕಿದ್ದರೆ, ಅಳಪೆಯಲ್ಲಿ ‘ನಾಗರಿಕರು’ ಎಂಬ ಹೆಸರಿನಡಿ ಫಲಕ ಅಳವಡಿಸಿದ್ದಾರೆ.

ಕ್ರಮಕ್ಕೆ ಆಗ್ರಹ: ಸೂಚನಾ ಫಲಕ ಅಳವಡಿಸಿರುವವರು ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವ ಮೂಲಕ ಮತೀಯ ದ್ವೇಷ ಸೃಷ್ಟಿಸಲು ಕಾರಣವಾಗುವವರ ವಿರುದ್ಧ ಕ್ರಮ ಜರುಗಿಸುವಂತೆ ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT