ಪಂಚಪೀಠಗಳಿಗೆ ತೀವ್ರ ನೋವು: ರಂಭಾಪುರಿಶ್ರೀ

7
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ

ಪಂಚಪೀಠಗಳಿಗೆ ತೀವ್ರ ನೋವು: ರಂಭಾಪುರಿಶ್ರೀ

Published:
Updated:
Deccan Herald

ದಾವಣಗೆರೆ: ‘ವೀರಶೈವ– ಲಿಂಗಾಯತ ಸಮಾಜವನ್ನು ಒಡೆಯಲು ಮುಂದಾದಾಗ ಪಂಚಪೀಠಗಳಿಗೆ ಆದ ನೋವನ್ನು ಹೇಳಲು ಸಾಧ್ಯವಿಲ್ಲ. ಕಳೆದ ಹತ್ತು ತಿಂಗಳ ಕಾಲ ನಡೆದ ಬೆಳವಣಿಗೆಯನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಆಗುವುದಿಲ್ಲ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಎಂದು ಹೇಳಿದರು.

ಶ್ರೀ ಮದ್ವೀರಶೈವ ಸದ್ಭೋಧನಾ ಸಂಸ್ಥೆಯ ದಾವಣಗೆರೆ ಜಿಲ್ಲಾ ಘಟಕದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 23ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದುಷ್ಟ ಶಕ್ತಿಗಳು ವೀರಶೈವ ಸಮಾಜವನ್ನು ಒಡೆಯಲು ಮುಂದಾದಾಗ ಸಮಾಜದ ಜನ ನಮ್ಮೊಂದಿಗೆ ಒಗ್ಗಟ್ಟಿನಿಂದ ಹೆಜ್ಜೆ ಇಟ್ಟರು. ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಬೆಂಬಲಕ್ಕೆ ನಿಂತು ಬಲ ತುಂಬಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಮಾಜವನ್ನು ಒಡೆಯುವ ಹುನ್ನಾರ ಈ ಹಿಂದೆಯೂ ನಡೆದಿತ್ತು. ಈಗಲೂ ನಡೆಯುತ್ತಿದೆ. ಆದರೆ, ಸಮಾಜ ಒಡೆಯುವ ಕೆಲಸ ಮಾಡಿದವರಿಗೆ ತಕ್ಕ ಪ್ರಾಯಶ್ಚಿತ್ತವಾಗಿದೆ. ಇದರ ನಡುವೆಯೂ ಧರ್ಮದ ಮೂಲತತ್ವ, ಸಮಷ್ಟಿ ಪ್ರಜ್ಞೆಯನ್ನು ಬೆಳೆಸಿಕೊಂಡು ನಾವು ಮುನ್ನಡೆಯುತ್ತಿದ್ದೇವೆ’ ಎಂದು ಹೇಳಿದರು.

‘ವೀರಶೈವ ಬಹುದೊಡ್ಡ ಸಮಾಜ. ಇದರ ಒಳಪಂಡಗಳನ್ನು ಒಡೆದರೆ ಸಮಾಜ ಬಹಳ ದಿನ ಉಳಿಯುವುದಿಲ್ಲ. ವೀರಶೈವ ಧರ್ಮಕ್ಕೂ ಅದರದ್ದೇ ಆದ ಸಂವಿಧಾನವಿದೆ. ಅದರಡಿ ನಡೆದರೆ ದರ್ಮಕ್ಕೆ ಎಂದಿಗೂ ಸಮಸ್ಯೆ ಬರುವುದಿಲ್ಲ. ಬಸವಾದಿ ಶಿವಶರಣರು ವೀರಶೈವ ಧರ್ಮವನ್ನು ಇನ್ನಷ್ಟು ಬೆಳೆಸುವ ಕೆಲಸ ಮಾಡಿದ್ದಾರೆ’ ಎಂದು ಸ್ವಾಮೀಜಿ ಹೇಳಿದರು. 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 1

  Frustrated
 • 5

  Angry

Comments:

0 comments

Write the first review for this !