ಪಾಂಡವಪುರ: ಭತ್ತ ಕಟಾವು ಮಾಡಲಿರುವ ಕುಮಾರಸ್ವಾಮಿ

7
ಸೀತಾಪುರ–ಅರಳಕುಪ್ಪೆ ಹಳೇಗದ್ದೆ ಬಯಲು ಪ್ರದೇಶದಲ್ಲಿ ಕಾರ್ಯಕ್ರಮ

ಪಾಂಡವಪುರ: ಭತ್ತ ಕಟಾವು ಮಾಡಲಿರುವ ಕುಮಾರಸ್ವಾಮಿ

Published:
Updated:
Deccan Herald

ಪಾಂಡವಪುರ: ತಾಲ್ಲೂಕಿನ ಸೀತಾಪುರ– ಅರಳಕುಪ್ಪೆ ಹಳೇ ಗದ್ದೆ ಬಯಲು ಪ್ರದೇಶದ ರೈತರ ಜಮೀನಿನಲ್ಲಿ ಬೆಳೆದು ನಿಂತಿರುವ ಭತ್ತವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಡಿ. 7ರಂದು ಮಧ್ಯಾಹ್ನ 3 ಗಂಟೆಗೆ ಕಟಾವು ಮಾಡಲಿದ್ದಾರೆ.

ಕೆಆರ್‌ಎಸ್ ಜಲಾಶಯ ಭರ್ತಿಯಾಗಿದ್ದರಿಂದ ಆ. 11ರಂದು ಗದ್ದೆಯಲ್ಲಿ ಭತ್ತ ನಾಟಿ ಮಾಡಿದ್ದರು. ಈಗ ಬೆಳೆ ಕಟಾವಿಗೆ ಬಂದಿದೆ. ಕುಮಾರಸ್ವಾಮಿ ಚಾಲನೆ ನೀಡಿದ ಬಳಿಕ ಕಾರ್ಮಿಕರು ಭತ್ತ ಕಟಾವು ಮುಂದುವರಿಸಲಿದ್ದಾರೆ. ಒಕ್ಕಣೆ ಮಾಡಿದ ಭತ್ತವನ್ನು ಕಣದಲ್ಲಿ ರಾಶಿ ಹಾಕಲಾಗುತ್ತದೆ. ನಂತರ ಮುಖ್ಯಮಂತ್ರಿ ಭತ್ತದ ರಾಶಿಗೆ ಪೂಜೆ ಸಲ್ಲಿಸುವರು.

ಅರಳಕುಪ್ಪೆ– ಸೀತಾಪುರ ಹಳೇಗದ್ದೆ ಬಯಲು ಪ್ರದೇಶದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಕಾವೇರಿ ನದಿಗೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. ₹ 78 ಕೋಟಿ ಮೊತ್ತದಲ್ಲಿ ಸೇತುವೆ ನಿರ್ಮಿಸಲಾಗುತ್ತದೆ. ವದೆಸಮುದ್ರ ಗ್ರಾಮಕ್ಕೆ ಭೇಟಿ ನೀಡಿ, ಬಸ್‌ ದುರಂತದಲ್ಲಿ ಮೃತಪಟ್ಟವರ ಕುಟಂಬದವರಿಗೆ ಪರಿಹಾರಧನದ ಚೆಕ್ ವಿತರಿಸಲಿದ್ದಾರೆ.

**

ನಾಟಿ ಮಾಡಿದ್ದ ಕುಮಾರಸ್ವಾಮಿ ಅವರು ಈಗ ಬೆಳೆದು ನಿಂತಿರುವ ಭತ್ತ ಕಟಾವು ಮಾಡಲು ಬರುತ್ತಿರುವುದು ಸಂತಸ ತಂದಿದೆ
– ದೇವರಾಜು, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !