ಶನಿವಾರ, ಡಿಸೆಂಬರ್ 7, 2019
21 °C

ಶಿವಕುಮಾರ ಶ್ರೀಗಳ ಭೇಟಿ ಮಾಡಿದ ಉಪಮುಖ್ಯಮಂತ್ರಿ ಡಾ.ಪರಮೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಬುಧವಾರ ರಾತ್ರಿ ಸ್ವಲ್ಪ ಜ್ವರ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರನ್ನು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಗುರುವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಭೇಟಿ ಬಳಿಕ ಮಾತನಾಡಿದ ಡಾ.ಪರಮೇಶ್ವರ, ‘ಬುಧವಾರ ರಾತ್ರಿ ಜ್ವರ ಕಾಣಿಸಿಕೊಂಡಿದ್ದರಿಂದ ಸ್ವಲ್ಪ ಆತಂಕವಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದು, ಸ್ವಾಮೀಜಿ ಆರಾಮಾಗಿದ್ದಾರೆ. ಎಂದಿನಂತೆಯೇ ನಮ್ಮನ್ನು ಸ್ವಾಮೀಜಿ ಮಾತನಾಡಿಸಿದರು. ಯಾವಾಗ ಬಂದ್ರಿ ಅಂದ್ರು. ಪ್ರಸಾದ ಸ್ವೀಕರಿಸಿ’ ಎಂದು ಹೇಳಿದರು.

ತಮ್ಮ ವಯಸ್ಸಿನ ಬಗ್ಗೆ ಎಷ್ಟು ಆಯ್ತು ಅಂಥಾ ಕಿರಿಯ ಸ್ವಾಮೀಜಿಗಳಿಗೆ ಕೇಳಿದ್ರು. ನೂರಾ ಹನ್ನೊಂದು ಎಂದು ಕಿರಿಯ ಶ್ರೀಗಳು ಹೇಳಿದಾಗ ಬಹಳ ಆಯ್ತು ಬಹಳ ಅಯ್ತು ಅಂತ ಸ್ವಾಮೀಜಿ ಹೇಳಿದರು ಎಂದು ಡಾ.ಪರಮೇಶ್ವರ ಭೇಟಿಯ ಕ್ಷಣಗಳನ್ನು ವಿವರಿಸಿದರು.

ಬುಧವಾರ ರಾತ್ರಿ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ವೈದ್ಯಕೀಯ ವರದಿಗಳೊಂದಿಗೆ ಚೆನ್ನೈನಲ್ಲಿರುವ ತಜ್ಞ ವೈದ್ಯರ ಜತೆ ಸ್ವಾಮೀಜಿಯವರ ಚಿಕಿತ್ಸೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಲು ಚೆನ್ನೈಗೆ ತೆರಳಿದ್ದಾರೆ. ಅವರು ಬಂದ ಬಳಿಕ ಚಿಕಿತ್ಸೆಯನ್ನು ಇಲ್ಲಿಯೇ ಮುಂದುವರಿಸಬೇಕೆ? ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಡೆಸಬೇಕೆ ಎಂಬುದರ ಬಗ್ಗೆ ತೀರ್ಮಾನ ಮಾಡಲಿದ್ದಾರೆ. ಸದ್ಯಕ್ಕೆ ಸ್ವಾಮೀಜಿ ಅರೋಗ್ಯವಾಗಿದ್ದು, ಆತಂಕಪಡಬೇಕಾಗಿಲ್ಲ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು