ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ನಲ್ಲೇ ಪುತ್ರನ ಮದುವೆ ಕಣ್ತುಂಬಿಕೊಂಡ ಪೋಷಕರು

Last Updated 13 ಮೇ 2020, 20:49 IST
ಅಕ್ಷರ ಗಾತ್ರ

ಹೊಸನಗರ: ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ಲಾಕ್‌ಡೌನ್‌ ಪರಿಣಾಮದಿಂದ ಮಗನ ಮದುವೆಗೆ ಹೋಗಲಾಗದೆ ಪೋಷಕರು ವಾಟ್ಸ್‌ ಆ್ಯಪ್‌ನಲ್ಲೇ ಪುತ್ರನ ಮದುವೆ ಕಣ್ತುಂಬಿಕೊಂಡಿದ್ದಾರೆ.

ಗ್ರಾಮದ ಜೋತಿಷಿ ಲಕ್ಷ್ಮಿನಾರಾಯಣ ಜೋಯಿಸ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಜಯಲಕ್ಷ್ಮಿ ಅವರಿಗೆ ತಮ್ಮ ಪುತ್ರ ಶಿವಶ್ಚಂದ್ರ ಜೋಯಿಸ್‌ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ಬುಧವಾರ ಬೆಳಿಗ್ಗೆ 7.30ಕ್ಕೆ ನಿಗದಿಯಾಗಿದ್ದ ಪುತ್ರನ ವಿವಾಹವನ್ನು ವಾಟ್ಸ್‌ಆ್ಯಪ್‌ನಲ್ಲೇ ಕಂಡು ದೂರದಿಂದಲೇ ಅಕ್ಷತೆ ಹಾಕಿ ಸಮಾಧಾನಪಟ್ಟುಕೊಂಡಿದ್ದಾರೆ.

ಶಿವಶ್ಚಂದ್ರ ಅವರ ವಿವಾಹ ಬೆಂಗಳೂರಿನ ಚಂದ್ರಶೇಖರ್‌, ಶೈಲಜಾ ದಂಪತಿಯ ಪುತ್ರಿ ಕಾವ್ಯ ಅವರೊಂದಿಗೆ ನಿಶ್ಚಯವಾಗಿತ್ತು.ಮಗನ ಮದುವೆಯನ್ನು ಸಂಭ್ರಮದಿಂದ ಮಾಡಬೇಕು. ಬಂಧು ಬಳಗ, ಸಂಬಂಧಿಕರನ್ನೆಲ್ಲಾ ಕರೆದು ಆತಿಥ್ಯ ನೀಡಬೇಕು ಎಂದು ತಂದೆ, ತಾಯಿ ಕನಸು ಕಂಡಿದ್ದರು. ಆದರೆಕೊರೊನಾ ತಡೆಗೆ ವಿಧಿಸಿದ್ದ ಲಾಕ್‌ಡೌನ್‌ ಅದನ್ನು ಹೊಸಕಿ ಹಾಕಿತ್ತು. ನಿಶ್ಚಯವಾದ ಮದುವೆ ನಿಗದಿತ ಮುಹೂರ್ತದಲ್ಲಿ ನಡೆಯಬೇಕು ಎಂದು ಪೋಷಕರು ತಮಗೆ ಹೋಗಲಾಗದಿದ್ದರೂ ದೂರ
ದಿಂದಲೇ ಪುತ್ರನ ಮದುವೆ ಕಣ್ತುಂಬಿಕೊಂಡರು.ವಧುವಿನ ಮನೆಯಲ್ಲೇ ವಿವಾಹ ಸರಳವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT