ಕೊಡಗು ಸಂತ್ರಸ್ತರ ಜಾನುವಾರು ರಕ್ಷಣೆ: ಕೂಡಿಗೆಯಲ್ಲಿ ಪಾಲನೆ 

7

ಕೊಡಗು ಸಂತ್ರಸ್ತರ ಜಾನುವಾರು ರಕ್ಷಣೆ: ಕೂಡಿಗೆಯಲ್ಲಿ ಪಾಲನೆ 

Published:
Updated:
Deccan Herald

ಕುಶಾಲನಗರ: ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಆಸ್ತಿ, ಮನೆ ಕಳೆದುಕೊಂಡ ನೂರಾರು ರೈತ ಕುಟುಂಬಗಳಿಗೆ ಸೇರಿದ ಜಾನುವಾರುಗಳಿಗೆ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಜಾನುವಾರು ಪಾಲನಾ ಕೇಂದ್ರ ಆರಂಭಿಸಲಾಗಿದೆ. ಹಸುಗಳಿಗೆ ಮೇವು, ನೀರು ಕಲ್ಪಿಸಲಾಗಿದೆ.

ಪ್ರವಾಹ, ಭೂಕುಸಿತದಿಂದ ಜನರು ತಮ್ಮ ಮನೆ ಕಳೆದುಕೊಂಡು ಬೀದಿಪಾಲಾದರು. ಅದೇ ರೀತಿ ಜಾನುವಾರು ಕೊಟ್ಟಿಗೆಗಳು ಧರೆಗುರುಳಿದ್ದು, ಹಸು, ಹಂದಿ, ಆಡುಕುರಿ, ಕೋಳಿ, ನಾಯಿಗಳು ಕೂಡ ಬೀದಿಗೆ ಬಂದವು. ಜನರು ಮಾತ್ರ ಅಲ್ಲಿಂದ ತಪ್ಪಿಸಿಕೊಂಡು ಬಂದರು. ಆದರೆ, ಜಾನುವಾರುಗಳನ್ನು ಕರೆ ತರಲು ಸಾಧ್ಯವಾಗಿರಲಿಲ್ಲ. ಅದರಲ್ಲಿ ಕೆಲವು ಹಸುಗಳನ್ನು ರಕ್ಷಿಸಿ ಪಾಲನಾ ಕೇಂದ್ರದಲ್ಲಿ ಇಡಲಾಗಿದೆ.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಆರಂಭಿಸಿರುವ ಕೇಂದ್ರದಲ್ಲಿ ಮುಕ್ಕೋಡ್ಲು, ಹಟ್ಟಿಹೊಳೆ, ಮಾದಾಪುರ, ಇಗ್ಗೋಡ್ಲು, ತಂತಿಪಾಲ ಸೇರಿದಂತೆ ಹಲವು ಗ್ರಾಮಗಳ ಹಸುಗಳು ಇಲ್ಲಿ ಆಶ್ರಯ ಪಡೆದಿವೆ.

ಹಸುಗಳಿಗೆ ಇಲ್ಲಿ ಆಶ್ರಯ ಕಲ್ಪಿಸಿದರೆ ಹಂದಿ, ಕುರಿಗಳಿಗೆ ಬೇಕಾಗುವ ಆಹಾರವನ್ನು ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ವಿತರಣೆ ಮಾಡಲಾಗುತ್ತಿದೆ. ಕೂಡಿಗೆ ಕೇಂದ್ರದಲ್ಲಿ 3 ತಿಂಗಳ ಕಾಲ ಜಾನುವಾರು ನಿರ್ವಹಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಸನ ಹಾಲು ಒಕ್ಕೂಟದಿಂದ 10 ಟನ್ ಪಶು ಆಹಾರ ಬಂದಿದೆ. ಮೈಸೂರು ಖಾಸಗಿ ಪಶುಸಾಕಣೆ ಕೇಂದ್ರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಫಾರಂನಿಂದ ಒಣಹುಲ್ಲು ಬಂದಿದೆ. ಮುಳ್ಳುಸೋಗೆ ಗ್ರಾಮದ ರೈತ ರಾಜಣ್ಣ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಸಿಜೋಳವನ್ನೇ ಉಚಿತವಾಗಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. 

ಪ್ರತಿದಿನ ಜಾನುವಾರುಗಳ ಪರೀಕ್ಷೆ ಮಾಡಿ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ ಎಂದು ಕೇಂದ್ರದ ಜಂಟಿ ನಿರ್ದೇಶಕ ಡಾ.ಚಿಟ್ಟಿಯಪ್ಪ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !