ಸೋಮವಾರ, ಆಗಸ್ಟ್ 2, 2021
20 °C

ರೈತರ ಎರಡನೇ ಕಂತಿನ ಹಣ ಪಾವತಿ, ₹1.000 ಕೋಟಿ ಬಿಡುಗಡೆ: ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಪ್ರತಿ ರೈತರ ಖಾತೆಗಳಿಗೆ ತಲಾ ₹2,000 ಪಾವತಿಸಲು ಸೋಮವಾರ ₹1,000 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಿಳಿಸಿದರು.

ಮಂಗಳವಾರ ನಗರದ ಶಂಕರಮಠದಲ್ಲಿ ಧನ್ವಂತ್ರಿ ಹೋಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ ಈ ವಿಷಯ ತಿಳಿಸಿದರು.

ಸುಮಾರು 50 ಲಕ್ಷ ರೈತರಿಗೆ ಇದರ ಪ್ರಯೋಜನ ಸಿಗುತ್ತದೆ. ರಾಜ್ಯದ ಹಣಕಾಸು ಸ್ಥಿತಿ ಅಷ್ಟಾಗಿ ಉತ್ತಮವಿಲ್ಲದೇ ಇದ್ದರೂ ರೈತರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ.  ಕೇಂದ್ರ ಸರ್ಕಾರ ಪ್ರತಿಯೊಬ್ಬ ರೈತನಿಗೆ ಎರಡು ಕಂತುಗಳಲ್ಲಿ ತಲಾ ₹3,000 ರಂತೆ ಒಟ್ಟು ₹6,000 ಮತ್ತು ರಾಜ್ಯ ಸರ್ಕಾರ ₹2,000 ರಂತೆ ಎರಡು ಕಂತುಗಳಲ್ಲಿ ₹4,000 ಪಾವತಿಸಲಾಗುವುದು. ಪ್ರತಿ ರೈತನಿಗೂ ವರ್ಷಕ್ಕೆ ₹10,000 ಸಿಗುತ್ತದೆ ಎಂದರು.

ಚಾಮರಾಜಪೇಟೆಯಲ್ಲಿರುವ ಶಂಕರ ಮಠಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ‌ ನೀಡಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ 19 ನಿಯಂತ್ರಣ ಉದ್ದೇಶದಿಂದ ಹಮ್ಮಿಕೊಂಡಿದ್ದ ಧನ್ವಂತರಿ ಯಾಗದಲ್ಲಿ ಭಾಗವಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು