ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಶ್ರೀಗಳ ಕೊನೆ ಕಾರ್ಯಕ್ರಮ

Last Updated 29 ಡಿಸೆಂಬರ್ 2019, 11:28 IST
ಅಕ್ಷರ ಗಾತ್ರ

ರಾಯಚೂರು: ನಗರದ ಶ್ರೀ ರಾಘವೇಂದ್ರಸ್ವಾಮಿ ಶಾಖಾ ಮಠದಲ್ಲಿ ಡಿಸೆಂಬರ್‌ 14 ರಂದು ಮೂರು ದಿನಗಳವರೆಗೆ ಆಯೋಜಿಸಿದ್ದ ಸಮಾರಂಭವು ಉಡುಪಿ ಪೇಜಾವರ ಶ್ರೀಗಳು ಪಾಲ್ಗೊಂಡಿದ್ದ ಕೊನೆಯ ಸಮಾರಂಭ.

ಡಿಸೆಂಬರ್‌ 15 ಮತ್ತು 16 ರಂದು ಶ್ರೀಗಳು ರಾಯಚೂರಿನಲ್ಲಿ ಉಳಿದುಕೊಂಡಿದ್ದರು. ಸಮಾರಂಭ ಮುಗಿಸಿಕೊಂಡು ರಾಯಚೂರಿನಿಂದ ತಿರುಪತಿಗೆ ಸಂಚರಿಸುವ ಮಾರ್ಗಮಧ್ಯೆ ಶ್ರೀಗಳಿಗೆ ನಿಮೋನಿಯಾ ಬಳಲಿಕೆ ಶುರುವಾಗಿತ್ತು.

ಮಂತ್ರಾಲಯದ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಿಂದ ‘ಹರಿದಾಸ ಸಾಹಿತ್ಯ ಸಮ್ಮೇಳನ’ ಹಾಗೂ ಶ್ರೀಮದ್‌ ನ್ಯಾಯಸುಧಾ ಮಹಾಮಂಗಳ’ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮ್ಮೇಳನದಲ್ಲಿ ರಾಜ್ಯದ 20 ಬ್ರಾಹ್ಮಣ ಮಠಗಳಿಂದಲೂ ಯತಿಗಳು ಭಾಗಿಯಾಗಿದ್ದರು. ಹಿರಿಯ ಯತಿ ಪೇಜಾವರ ಶ್ರೀಗಳೊಂದಿಗೆ ಎಲ್ಲ ಸ್ವಾಮೀಜಿಗಳು ಮುಕ್ತವಾಗಿ ಚರ್ಚಿಸುವ ಅವಕಾಶ ನಿರ್ಮಾಣವಾಗಿತ್ತು. ನ್ಯಾಯಸುಧಾ ಮಹಾಮಂಗಳ ಗ್ರಂಥಕ್ಕೆ ಸಂಬಂಧಿಸಿದ ಸಂವಾದದಲ್ಲಿ ಪೇಜಾವರ ಶ್ರೀಗಳು ಉಪದೇಶ ನೀಡಿದ್ದರು.

ಮಂತ್ರಾಲಯ ಮಠದಿಂದ ಆಯೋಜಿಸುತ್ತಾ ಬರುವ ನ್ಯಾಯಸುಧಾ ಮಹಾಮಂಗಳ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ಪೇಜಾವರ ಶ್ರೀ ಪಾಲ್ಗೊಳ್ಳುತ್ತಾ ಬಂದಿರುವುದು ವಿಶೇಷ.

ಮಾಧ್ಯಮಗಳಿಗೆ ಹೇಳಿಕೆ: ಇದೇ ಸಮಾರಂಭದಲ್ಲಿ ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯೆ ಕೊಟ್ಟಿದ್ದು ಕೂಡಾ ಕೊನೆಯದಾಗಿತ್ತು. ‘ಬಾಂಗ್ಲಾದೇಶದಿಂದ ವಲಸೆ ಬಂದವರಿಗೆ ಬಂಗಾಳದಲ್ಲಿಯೇ ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಬೇಕು’ ಎನ್ನುವ ಸಲಹೆ ನೀಡಿದ್ದರು.

’ಪ್ರಪಂಚದಲ್ಲಿ ಹಿಂದುಗಳಿಗೆ ಭಾರತವೊಂದೇ ರಾಷ್ಟ್ರ. ವಿವಿಧ ದೇಶಗಳಿಂದ ಹೊರಗೆ ಹಾಕಿರುವ ಹಿಂದುಗಳಿಗೆ ಆಶ್ರಯ ನೀಡಲು ಕೇಂದ್ರ ಸರ್ಕಾರ ಜಾರಿಗೊಳಿಸುವ ಕಾಯ್ದೆ ಸರಿಯಾಗಿದೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT