ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವೆ ತುಂಡಲ್ಲೂ ರಾಷ್ಟ್ರಭಕ್ತಿ: ಪೇಜಾವರ ಶ್ರೀ

Last Updated 28 ಮೇ 2019, 12:56 IST
ಅಕ್ಷರ ಗಾತ್ರ

ಚಿತ್ರದುರ್ಗ:‘ರಾಷ್ಟ್ರಧ್ವಜಕ್ಕೆ ನಾವೆಲ್ಲ ವಂದನೆ ಸಲ್ಲಿಸುತ್ತೇವೆ. ಅದೊಂದು ಅರಿವೆ (ಬಟ್ಟೆ) ತುಂಡು. ಅಂತಹ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದರಿಂದ ದೇಶಭಕ್ತಿ ಮೂಡುತ್ತದೆ’ ಎಂದುಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ರಾಜರಾಜೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು. ‘ಕಲ್ಲು, ಶಿಲೆಯಷ್ಟೇ ದೇವರಲ್ಲ’ ಎಂಬುದನ್ನು ಭಕ್ತರಿಗೆ ಮನವರಿಕೆ ಮಾಡಿಕೊಡುವ ಸಂದರ್ಭದಲ್ಲಿ ಅವರು‘ರಾಷ್ಟ್ರಧ್ವಜ ಅರಿವೆ ತುಂಡು’ ಎಂಬ ನಿದರ್ಶನ ನೀಡಿದರು.

‘ಶಿಲೆಯಲ್ಲಿ ಅರಳುವ ಮೂರ್ತಿಯಲ್ಲಿ ವಿಶ್ವವ್ಯಾಪಿಯಾದ ಭಗವಂತನ ದರ್ಶನ ಪಡೆಯಲು ದೇಗುಲದ ಅಗತ್ಯವಿದೆ. ದೇಗುಲದಲ್ಲಿ ಸ್ಫೂರ್ತಿ, ಜಾಗೃತಿ ಉಂಟಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT