ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೇಜಾವರ ಶ್ರೀಗಳಿಂದ ₹ 10 ಲಕ್ಷ ನೆರವು

ಕೊಡುಗು, ಸುಳ್ಯ ನೆರೆ ಸಂತ್ರಸ್ತರ ನೆರವಿಗೆ ಧನ ಸಹಾಯ
Last Updated 22 ಆಗಸ್ಟ್ 2018, 17:31 IST
ಅಕ್ಷರ ಗಾತ್ರ

ಉಡುಪಿ: ಕೊಡಗಿನ ನೆರೆ ಸಂತ್ರಸ್ತರ ಸಹಾಯಾರ್ಥವಾಗಿ ₹ 10 ಲಕ್ಷ ನೆರವು ನೀಡುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡನಾಡಿನ ರಮಣೀಯ ಸ್ಥಳವಾದ ಕೊಡಗು ಹಾಗೂ ಸುಳ್ಯ ಭೀಕರ ಪ್ರವಾಹದಿಂದ ನಲುಗಿದೆ. ಸಾವು ನೋವುಗಳು ಸಂಭವಿಸಿವೆ. ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದ್ದು, ಮಠದ ಟ್ರಸ್ಟ್‌ನಿಂದ ₹ 10 ಲಕ್ಷ ಬಿಡುಗಡೆ ಮಾಡುವುದಾಗಿ ಪೇಜಾವರ ಶ್ರೀಗಳು ತಿಳಿಸಿದ್ದಾರೆ.

ಚಾತುರ್ಮಾಸ್ಯವಾಗಿರುವುದರಿಂದ ನೆರೆಪೀಡಿತ ಪ್ರದೇಶಗಳಿಗೆ ಹೋಗಲು ಸಾಧ್ಯವಾಗಿಲ್ಲ. ಚಾತುರ್ಮಾಸ್ಯದ ನಂತರ ಖುದ್ದು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಪರಿಹಾರದ ಕಾರ್ಯಸ್ವರೂಪವನ್ನು ನಿರ್ಧರಿಸಲಾಗುವುದು ಎಂದರು.

ಗ್ರಾಮ ದತ್ತು: ಪ್ರಕೃತಿ ವಿಕೋಪಕ್ಕೆ ಗುರಿಯಾದ ಜನರ ಪುನರ್ವಸತಿ ಕಾರ್ಯದಲ್ಲಿ ಶ್ರೀಕೃಷ್ಣ ಮಠ, ಪರ್ಯಾಯ ಪಲಿಮಾರು ಮಠದಿಂದ ಗ್ರಾಮವನ್ನು ದತ್ತು ತೆಗೆದುಕೊಳ್ಳಲಾಗುವುದು ಎಂದು ವಿದ್ಯಾಧೀಶ ತೀರ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೆರವು ನೀಡಲಿಚ್ಚಿಸುವವರು, ಯೋಗದೀಪಿಕ ಟ್ರಸ್ಟ್‌, ಖಾತೆ ಸಂಖ್ಯೆ 01092200021434, ಐಎಫ್‌ಎಸ್‌ಸಿ: SYNB 0000109, ಸಿಂಡಿಕೇಟ್‌ ಬ್ಯಾಂಕ್‌, ರಥಬೀದಿ, ಉಡುಪಿ ಖಾತೆಗೆ ಹಣ ಸಂದಾಯ ಮಾಡಬಹುದು. ಪ್ಯಾನ್ ನಂಬರ್: AAATY140G. ದೇಣಿಗೆ ತೆರಿಗೆ ವಿನಾಯ್ತಿಗೊಳಪಟ್ಟಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT