ಎನ್‍ಐಆರ್‌ಎಫ್‌ ಲೋಪ ರ‍್ಯಾಂಕ್‌ ಕುಸಿತ

ಬುಧವಾರ, ಏಪ್ರಿಲ್ 24, 2019
30 °C
ತಪ್ಪು ಸರಿಪಡಿಸುವಂತೆ ‍ಪಿಇಎಸ್ ವಿಶ್ವವಿದ್ಯಾಲಯ ಕುಲಾಧಿಪತಿ ಆಗ್ರಹ

ಎನ್‍ಐಆರ್‌ಎಫ್‌ ಲೋಪ ರ‍್ಯಾಂಕ್‌ ಕುಸಿತ

Published:
Updated:

ಬೆಂಗಳೂರು: ‘ನ್ಯಾಷನಲ್‌ ಇನ್‍ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‍ವರ್ಕ್‌ (ಎನ್‍ಐಆರ್‌ಎಫ್‌) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಲೋಪದೋಷಗಳಿರುವ ಕಾರಣ ಪಿಇಎಸ್‌ ವಿಶ್ವವಿದ್ಯಾಲಯದ ರ‍್ಯಾಂಕ್‌ 149ಕ್ಕೆ ಕುಸಿದಿದೆ. ತಪ್ಪುಗಳನ್ನು ಸರಿಪಡಿಸದೇ ಹೋದರೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದು ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶ ವ್ಯಾಪ್ತಿಯ ಪ್ರಖ್ಯಾತ 100 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪಿಇಎಸ್ 2016ರಲ್ಲಿ 98, 2017ರಲ್ಲಿ 94, 2018ರಲ್ಲಿ 99ನೇ ಸ್ಥಾನ ಪಡೆದುಕೊಂಡಿತ್ತು. ಆದರೆ, ಈ ಬಾರಿ 149ನೇ ಸ್ಥಾನ ದಕ್ಕಿದ್ದು, ಅಚ್ಚರಿ ಮೂಡಿಸಿದೆ’ ಎಂದು ಹೇಳಿದರು.

‘2017-18ನೇ ಸಾಲಿನಲ್ಲಿ 664 ವಿದ್ಯಾರ್ಥಿಗಳು ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಂಡು ಉತ್ತಮ ಸ್ಥಾನದಲ್ಲಿದ್ದಾರೆ. ಆದರೆ, ಕೇವಲ 42 ವಿದ್ಯಾರ್ಥಿಗಳಿಗೆ ಪ್ಲೇಸ್‍ಮೆಂಟ್ ಆಗಿದೆ ಎಂದು ಉಲ್ಲೇಖಿಸಿರುವ ಪರಿಣಾಮ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 149ನೇ ಸ್ಥಾನ ಬಂದಿದೆ. ವಿಶ್ವವಿದ್ಯಾಲಯಕ್ಕೆ ನೀಡಿರುವ ದರ್ಜೆ, ಅಂಕಿ ಅಂಶಗಳು ಸಂಪೂರ್ಣ ತಪ್ಪಾಗಿವೆ. ತಕ್ಷಣವೇ ಪಟ್ಟಿಯನ್ನು ಪರಿಶೀಲಿಸಿ ಆಗಿರುವ ತಪ್ಪನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಎನ್‍ಐಆರ್‌ಎಫ್‌ನ ಸದಸ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಆದರೆ, ಅವರು ನಿರ್ಲಕ್ಷ್ಯದ ಉತ್ತರ ಕೊಟ್ಟಿದ್ದಾರೆ. ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಹೋರಾಟ ನಡೆಸಲಾಗುವುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !