ಪೆಟ್ರೋಲ್‌ ಬಂಕ್‌ಗೆ ಬೆಂಕಿ: ಇಬ್ಬರಿಗೆ ಗಾಯ

7

ಪೆಟ್ರೋಲ್‌ ಬಂಕ್‌ಗೆ ಬೆಂಕಿ: ಇಬ್ಬರಿಗೆ ಗಾಯ

Published:
Updated:
Prajavani

ಚಿತ್ರದುರ್ಗ: ಇಲ್ಲಿನ ಜೆಸಿಆರ್ ಬಡಾವಣೆಯ ಗಾಯತ್ರಿ ವೃತ್ತದಲ್ಲಿರುವ ಪೆಟ್ರೋಲ್‌ ಬಂಕ್‌ಗೆ ಬುಧವಾರ ಸಂಜೆ ಬೆಂಕಿ ಬಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೆಟ್ರೋಲ್ ಟ್ಯಾಂಕರ್‌ನಿಂದ ಬಂಕ್‌ಗೆ ಇಂಧನ ತುಂಬಿಸುವ ಸಂದರ್ಭದಲ್ಲಿ ಈ ಅವಘಡ ಸಂಭವಿದೆ. ಟ್ಯಾಂಕರ್‌ ಚಾಲಕ ನೌಷಾದ್‌ ಹಾಗೂ ಸಹಾಯಕ ಮುಜೀದ್‌ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಾಸುದೇವ ರೆಡ್ಡಿ ಎಂಬುವರಿಗೆ ಸೇರಿದ ಪೆಟ್ರೋಲ್‌ ಬಂಕ್‌ಗೆ ಸಂಜೆ 7 ಗಂಟೆಯ ಸುಮಾರಿಗೆ ಟ್ಯಾಂಕರ್‌ ಮೂಲಕ ಪೆಟ್ರೋಲ್‌ ತುಂಬಿಸಲಾಗುತ್ತಿತ್ತು. ಸುಮಾರು 12 ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ನಿಂದ 8 ಸಾವಿರ ಲೀಟರ್‌ ಡೀಸೆಲ್‌ ಇಳಿಸಲಾಗಿತ್ತು. 4 ಸಾವಿರ ಲೀಟರ್‌ ಪೆಟ್ರೋಲ್‌ ತುಂಬಿಸುವ ಸಮಯದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಟ್ಯಾಂಕರ್‌ನ ಇಂಧನ ಕೊಳವೆಯ ಮೂಲಕ ಹೊರಬಂದ ಬೆಂಕಿ ಸಮೀಪದಲ್ಲಿದ್ದ ಇಬ್ಬರಿಗೂ ವ್ಯಾಪಿಸಿದೆ. ಪೆಟ್ರೋಲ್‌ ಟ್ಯಾಂಕರ್‌ನ ಚಕ್ರಗಳು ಒಂದೊಂದಾಗಿ ಸಿಡಿದಿವೆ. ಭಾರಿ ಸದ್ದಿಗೆ ಬೆಚ್ಚಿದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದ ಸಿಬ್ಬಂದಿ ಫೋಮ್‌ ಬಳಸಿ ಬೆಂಕಿ ಆರಿಸಿದ್ದಾರೆ. ಇದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !