ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ ಕೇಂದ್ರ ಆರಂಭಕ್ಕೆ ಆಗ್ರಹ

Last Updated 28 ಫೆಬ್ರುವರಿ 2018, 6:31 IST
ಅಕ್ಷರ ಗಾತ್ರ

ಮಸ್ಕಿ: ತೊಗರಿ ಕೇಂದ್ರಗಳನ್ನು ಪುನರಾಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಇಲ್ಲಿನ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.

ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ಪ್ರತಿಯೊಬ್ಬ ರೈತರಿಂದ ಸರ್ಕಾರ 20 ಕ್ವಿಂಟಲ್‌ ತೊಗರಿ ಖರೀದಿಸುತ್ತಿತ್ತು. ನಂತರ 10 ಕ್ವಿಂಟಲ್‌ ಖರೀದಿಗೆ ಆದೇಶಿಸಿತು.  ಆದರೆ, ಈಗ ತೊಗರಿ ಕೇಂದ್ರ ಬಂದ್‌ ಮಾಡಿದ್ದರಿಂದ ತೊಗರಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಸರ್ಕಾರ ಕೂಡಲೇ ತೊಗರಿ ಕೇಂದ್ರಗಳ ಪುನರಾಂಭಿಸಬೇಕು ಎಂದು ಆಗ್ರಹಿಸಿದರು.

ಸಂಘದ ತಾಲ್ಲೂಕು ಅಧ್ಯಕ್ಷ ಸಂತೋಷ ಹಿರೇದಿನ್ನಿ, ಅಮರೇಶ ಪಾಮನಕೆಲ್ಲೂರು, ಮಾರುತಿ ಜಿನ್ನಾಪುರ, ಪರಶುರಾಮ ಹಿರೇದಿನ್ನಿ, ಮೌನೇಶ ತುಗ್ಗಲದಿನ್ನಿ, ಶ್ರೀನಿವಾಸ್‌ ಹೂವಿನಭಾವಿ, ಹುಚ್ಚರೆಡ್ಡೆಪ್ಪ ಹಿರೇದಿನ್ನಿ, ಭೀರಪ್ಪ ಹಿರೆದಿನ್ನಿ, ಅಂಬಣ್ಣ ಪೂಜಾರಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT