ಬೇಟೆಗೆ ಹೋದಾಗ ಷಹಾಜಿ ಮೃತಪಟ್ಟ: ಪಿ.ಜಿ.ಆರ್‌. ಸಿಂಧ್ಯಾ

7
ಭಾರತ್ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ

ಬೇಟೆಗೆ ಹೋದಾಗ ಷಹಾಜಿ ಮೃತಪಟ್ಟ: ಪಿ.ಜಿ.ಆರ್‌. ಸಿಂಧ್ಯಾ

Published:
Updated:
Deccan Herald

ದಾವಣಗೆರೆ: ಶಿವಾಜಿಯ ತಂದೆ ಷಹಾಜಿಗೆ ಬೇಟೆಯಾಡುವ ಅಭ್ಯಾಸವಿತ್ತು. ವೀರಶೈವ ಸಾಮಂತನೊಂದಿಗೆ ಬೇಟೆಯಾಡಲು ಬಂದಾಗ ಹೊದಿಗೆರೆಯಲ್ಲಿ ಆತ ಮೃತಪಟ್ಟ. ವೀರಶೈವ ಸಮಾಜದವರೇ ಆತನ ಸಮಾಧಿ ಮಾಡಿದರು ಎಂದು ಭಾರತ್ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ನ ರಾಜ್ಯ ಆಯುಕ್ತ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ‘ದಾವಣಗೆರೆ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ’ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಹೊದಿಗೆರೆಯಲ್ಲಿ ಮರಾಠ ಸಮುದಾಯದವರು ಇಲ್ಲ. ಲಿಂಗಾಯತ, ನಾಯಕ ಸಮಾಜದವರೇ ಷಹಾಜಿಯ ಸಮಾಧಿಯನ್ನು ಸಂರಕ್ಷಿಸಿದ್ದಾರೆ. ದೇಶದಲ್ಲಿ 10 ಕೋಟಿಯಷ್ಟಿರುವ ಮರಾಠರು ಷಹಾಜಿ ಸಮಾಧಿಯನ್ನು ಸಂರಕ್ಷಿಸುವ, ಹೊದಿಗೆರೆಯನ್ನು ಸ್ಮಾರಕ ಗ್ರಾಮವನ್ನಾಗಿಸುವ ಕೆಲಸ ಮಾಡಲಿಲ್ಲ. ಚುನಾವಣೆಯಲ್ಲಿ ಶಿವಾಜಿಯ ಹೆಸರು ಬಳಸಿಕೊಂಡು ಮತಗಳಿಕೆಗಷ್ಟೇ ಸೀಮಿತವಾಗಿದ್ದಾರೆ’ ಎಂದು ಟೀಕಿಸಿದರು.

‘ಮರಾಠ ಸಮುದಾಯದ ಅಭಿವೃದ್ಧಿಗೆ ನಾನು ಏನೂ ಕೆಲಸ ಮಾಡಲಿಲ್ಲ. ಯುದ್ಧದಲ್ಲಿ ಸಾವನ್ನಪ್ಪಿದ ಷಹಾಜಿ ಸಮಾಧಿಯ ಸಂರಕ್ಷಣೆಗೂ ಪ್ರಯತ್ನಿಸಲಿಲ್ಲ ಎಂದು ಅಪಪ್ರಚಾರ ಮಾಡಿದರು. ಹೀಗಾಗಿ, ಹೊದಿಗೆರೆಗೆ ಭೇಟಿ ನೀಡಿ, ಇತಿಹಾಸ ಅಧ್ಯಯನ ಮಾಡಿದೆ. ಸತ್ಯ ತಿಳಿದುಕೊಂಡೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !