ಸೋಮವಾರ, ಸೆಪ್ಟೆಂಬರ್ 16, 2019
27 °C

ಕೊಲೆ ಆರೋಪಿ ಬೈರಗೊಂಡಗೆ ಗೌರವ ಡಾಕ್ಟರೇಟ್‌

Published:
Updated:
Prajavani

ವಿಜಯಪುರ: ಭೀಮಾತೀರದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ, ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಹಾದೇವ ಸಾಹುಕಾರ ಬೈರಗೊಂಡಗೆ ಏಷಿಯನ್‌ ಇಂಟರ್‌ನ್ಯಾಷನಲ್‌ ಇಂಡೋನೆಷಿಯಾ ವಿಶ್ವವಿದ್ಯಾಲಯವು ಈಚೆಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ!

ಬೈರಗೊಂಡ ಅವರು ಭೀಮಾತೀರದ ಧರ್ಮರಾಜ ಚಡಚಣ ಕೊಲೆ ಹಾಗೂ ಗಂಗಾಧರ ಚಡಚಣ ನಾಪತ್ತೆ ಮತ್ತು ನಿಗೂಢ ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿ.

ಕೆರೂರ ಗ್ರಾಮದ ಬೈರವನಾಥ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಏಷಿಯನ್‌ ಇಂಟರ್‌ ನ್ಯಾಷನಲ್‌ ಇಂಡೋನೇಷಿಯಾ ವಿಶ್ವವಿದ್ಯಾಲಯದ ಕರ್ನಾಟಕದ ಸಂಯೋಜಕ ಡಾ.ರಾಜು ರೋಖಡೆ ಅವರು ಬೈರಗೊಂಡ ಅವರ ‘ಸಮಾಜ ಸೇವೆ’ಗಾಗಿ ಪದವಿ ಪ್ರದಾನ ಮಾಡಿದರು.

Post Comments (+)