ಭಾನುವಾರ, ಮೇ 31, 2020
27 °C

ಕುಣಿಗಲ್| ಕುಂಬಳಕಾಯಿ, ಬಾಳೆ ಕೇಳುವವರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಬೇಗೂರುನಲ್ಲಿ ರೈತ ಶ್ರೀನಿವಾಸ್ ಮೂರ್ತಿ ಎರಡು ಎಕರೆಯಲ್ಲಿ ಕುಂಬಳಕಾಯಿ, ಬಾಳೆ ಬೆಳೆದಿದ್ದು, ಲಾಕ್‌ಡೌನ್‌ನಿಂದಾಗಿ ಮಾರಾಟ ಸಾಧ್ಯವಾಗಿಲ್ಲ.

ಆಟೊ ಚಾಲಕರು ಆದ ಶ್ರೀನಿವಾಸ್‌ಮೂರ್ತಿ ಮೊದಲ ರಾಗಿ ಬೆಳೆಯುತ್ತಿದ್ದರು. ಸ್ನೇಹಿತರ ಸಲಹೆಯಂತೆ ಕಂಬಳಕಾಯಿ ಮತ್ತು ಬಾಳೆ ಬೆಳೆದಿದ್ದರು.

ಕೃಷಿಗೆ ಸುಮಾರು ₹1.25 ಲಕ್ಷ ಖರ್ಚು ಮಾಡಿದ್ದಾರೆ. 3 ಟನ್ ಕುಂಬಳಕಾಯಿ ಮತ್ತು 600 ಬಾಳೆಗೊನೆಗಳು ಬೆಳೆದು ಕಟಾವಿಗೆ ಬಂದಿವೆ. ಆದರೆ, ಮಾರಾಟಕ್ಕೆ ಪರದಾಡಬೇಕಾಗಿದೆ.

‘ಶಾಸಕ ಡಾ.ರಂಗನಾಥ್‌ ಅವರ ಬೆಂಬಲಿಗರಿಗೆ ಕುಂಬಳಕಾಯಿ ಖರೀದಿಗೆ ಮನವಿ ಮಾಡಿದೆ. ಈಗ ಖರೀದಿಸಿರುವುದೇ ಉಳಿದಿವೆ ಎಂಬ ಉತ್ತರ ಬಂತು. ರಾಜಕಾರಣಿಗಳು ಉಚಿತವಾಗಿ ವಿತರಿಸುತ್ತಿದ್ದಾರೆ. ಕಾಸು ಕೊಟ್ಟು ಕೊಳ್ಳುವವರಿಲ್ಲ. ಹೋಟೆಲ್‌ಗಳು ಬಂದ್ ಆಗಿದ್ದು, ಅಲ್ಲಿಗೂ ಮಾರಲು ಆಗುತ್ತಿಲ್ಲ. ನಷ್ಟದ ಆತಂಕವಿದೆ‘ ಎನ್ನುತ್ತಾರೆ.

ಜಮೀನು ನಂಬಿ ಬಂಡವಾಳ ಹಾಕಿದ್ದೇನೆ. ಸರ್ಕಾರದ ಸವಲತ್ತು ಬರುವವರೆಗೂ ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ
-ಶ್ರೀನಿವಾಸ್ ಮೂರ್ತಿ, ರೈತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು