ಶ್ರೀಗಳು ನನ್ನನ್ನು ಮಗನಂತೆ ಕಂಡಿದ್ದರು: ಮೋದಿ

7

ಶ್ರೀಗಳು ನನ್ನನ್ನು ಮಗನಂತೆ ಕಂಡಿದ್ದರು: ಮೋದಿ

Published:
Updated:

ವಾರಾಣಸಿ: ‘ತುಮಕೂರು ಮಠದಲ್ಲಿ ಹಲವಾರು ಬಾರಿ ಶ್ರೀಗಳ ಆಶೀರ್ವಾದ ಪಡೆಯುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ನನ್ನನ್ನು ಅವರು ಪ್ರೀತಿಯಿಂದ ಮಗನಂತೆ ಕಂಡಿದ್ದಾರೆ. ಅವರಂಥ ಸ್ವಾಮೀಜಿಯನ್ನು ಕಳೆದುಕೊಂಡಿರುವುದು ತುಂಬಲಾರದ ಹಾನಿ’ ಎಂದು ಪ್ರವಾಸಿ ಭಾರತೀಯ ದಿನ ಸಮಾವೇಶದಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ನೆನಪಿಸಿಕೊಂಡರು.

ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮೋದಿ, ಮನುಕುಲಕ್ಕಾಗಿ ಅವರು ಮಾಡಿದ ಕೆಲಸಗಳನ್ನು ದೇಶವು ಎಂದೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ. 

‘ನಡೆದಾಡುವ ದೇವರು’ ಶಿವಕುಮಾರ ಸ್ವಾಮಿಗಳು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಅವರ ಜನೋಪಕಾರಿ ಮನೋಭಾವವನ್ನು ಎಂದಿಗೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂದರು.

ಬರಹ ಇಷ್ಟವಾಯಿತೆ?

  • 6

    Happy
  • 1

    Amused
  • 2

    Sad
  • 0

    Frustrated
  • 0

    Angry

Comments:

0 comments

Write the first review for this !