ಕನಕಪುರದಲ್ಲಿ ರೇಷ್ಮೆ ಗೂಡು ಗುಣಮಟ್ಟ ಪರೀಕ್ಷಾ ಕೇಂದ್ರ?

7

ಕನಕಪುರದಲ್ಲಿ ರೇಷ್ಮೆ ಗೂಡು ಗುಣಮಟ್ಟ ಪರೀಕ್ಷಾ ಕೇಂದ್ರ?

Published:
Updated:

ರಾಮನಗರ: ಶೀಘ್ರದಲ್ಲಿಯೇ ರೇಷ್ಮೆ ಗೂಡು ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಕನಕಪುರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಆರಂಭಿಸಲಾಗುತ್ತಿದೆ ಎಂದು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಮುನ್ಷಿ ಬಸಯ್ಯ ತಿಳಿಸಿದರು.

ಒಂದೆರಡು ವಾರಗಳಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲವು ವರ್ಷಗಳಿಂದ ರೇಷ್ಮೆ ಗೂಡು ದರ ಕುಸಿತದಿಂದ ಕಂಗಾಲಾದ ರೈತರು ರೇಷ್ಮೆ ಗೂಡನ್ನು ರಸ್ತೆಗೆ ಚೆಲ್ಲಿ ಹಾಗೂ ಹಿಪ್ಪು ನೇರಳೆ ಗಿಡಗಳನ್ನು ಕಿತ್ತು ಹಾಕಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿ, ಸರ್ಕಾರ ರೇಷ್ಮೆ ಗೂಡಿಗೆ ವೈಜ್ಞಾನಿಕ ದರ ನಿಗಪಡಿಸಬೇಕು ಎಂದು ಒತ್ತಾಯಿಸಿತ್ತು. ಇದರ ಫಲವಾಗಿ ಸರ್ಕಾರ ಪ್ರೊ.ಬಸವರಾಜ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.

ಈ ಸಮಿತಿ ಅಧ್ಯಯನ ಮಾಡಿ ನೀಡಿದ ವರದಿ ಮೇರೆಗೆ ಕನಕಪುರದ ರೇಷ್ಮೆ ಗೂಡು ಮಾರುಕಟ್ಟೆ ಆವರಣದಲ್ಲಿ ರೇಷ್ಮೆಗೂಡು ಗುಣಮಟ್ಟ ಪರೀಕ್ಷಾ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !