ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಪ್ರಸಾದ ಸೇವನೆ: ಸಾವಿನ ಸಂಖ್ಯೆ 15ಕ್ಕೆ ಏರಿಕೆ; ಐಸಿಯುನಲ್ಲಿ 37 ಮಂದಿ

ಮೈಸೂರಿನಲ್ಲಿ ಆಸ್ಪತ್ರೆಗಳಲ್ಲಿ 100 ಮಂದಿಗ ಚಿಕಿತ್ಸೆ
Last Updated 18 ಡಿಸೆಂಬರ್ 2018, 9:25 IST
ಅಕ್ಷರ ಗಾತ್ರ

ಚಾಮರಾಜನಗರ:ಸುಳ್ವಾಡಿ ಗ್ರಾಮದ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದ ಗುಂಡಮ್ಮ ಮಂಗಳವಾರ ನಿಧನರಾದರು.

ಮಹದೇಶ್ವರ ಬೆಟ್ಟದ ನಿವಾಸಿ ಗುಂಡಮ್ಮಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನ ವಿಷಯ ತಿಳಿಯುತ್ತಿದ್ದಂತೆಯೇ ಅವರ ಮಗಳುಅನ್ನಪೂರ್ಣ ಅಸ್ವಸ್ಥರಾಗಿದ್ದಾರೆ.

ಸುಳ್ವಾಡಿ ದುರಂತದಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದ್ದು, ಮೈಸೂರಿನ ಹನ್ನೊಂದು ಆಸ್ಪತ್ರೆಗಳಲ್ಲಿ 100 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 37 ಜನರು ಐಸಿಯುನಲ್ಲಿದ್ದು, 21 ಜನರಿಗೆ ವೆಂಟಿಲೇಷನ್ ವ್ಯವಸ್ಥೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೀಟನಾಶಕಗಳಲ್ಲಿ ಬಳಸಲಾಗುವ ‘ಆರ್ಗನೊ ಫಾಸ್ಫರಸ್‌’ ಗುಂಪಿಗೆ ಸೇರಿದ ‘ಮೊನೊ ಕ್ರೋಟೊಫಾಸ್‌’ ರಾಸಾಯನಿಕ ಅಂಶಪ್ರಸಾದ ಸೇವಿಸಿ ಅಸ್ಸ್ಥರಾದವರ ದೇಹದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಲಾದ ಪ್ರಯೋಗಾಲಯ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT