ಭಾನುವಾರ, ಮೇ 9, 2021
25 °C
ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ವಿಡಿಯೊ ತುಣುಕು

ಚರ್ಚ್‌ನ ಸಾಮೂಹಿಕ ಪ್ರಾರ್ಥನೆಯಲ್ಲಿ ಪೊಲೀಸ್ ಕಮಿಷನರ್ ಭಾಗಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ಲಾಕ್‌ಡೌನ್ ನಡುವೆ ನಗರದ ಚರ್ಚ್ ಒಂದರಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭಾಗಿಯಾದ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಕ್ಷ್ಯ ಎಂಬಂತೆ ಭಾಸ್ಕರ್ ರಾವ್ ಪ್ರಾರ್ಥನೆ ಮಾಡುತ್ತಿರುವ ವಿಡಿಯೊ ತುಣುಕು  ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆ ಕೂಡಾ ನಡೆಯುತ್ತಿದೆ.

ತಾವೇ ನಗರದ ಎಲ್ಲ ಚರ್ಚ್, ಮಸೀದಿ, ದೇವಸ್ಥಾನಗಳ ಬಂದ್​ಗೆ ಆದೇಶ ನೀಡಿದ್ದ  ಭಾಸ್ಕರ್ ರಾವ್, ಈಗ ತಾವೇ ಚರ್ಚ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಹತ್ತಕ್ಕೂ ಹೆಚ್ಚು ಮಂದಿ ಪೊಲೀಸರೂ ಪ್ರಾರ್ಥನೆ ಮಾಡುವ ದೃಶ್ಯ ವಿಡಿಯೊದಲ್ಲಿದೆ.

ಚರ್ಚ್ ಫಾದರ್ ಅವರ ಸಮೀಪದಲ್ಲಿ ನಿಂತುಕೊಂಡು ಭಾಸ್ಕರ್ ರಾವ್ ಪ್ರಾರ್ಥನೆ  ಮಾಡುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳಲಾಗಿದೆ. ಆದರೆ, ಪ್ರಾರ್ಥನೆಯಲ್ಲಿ  ಭಾಗಿಯಾದ ಎಲ್ಲರೂ ಮಾಸ್ಕ್  ಧರಿಸಿಲ್ಲ.

ಕೇವಲ ಕೆಲವು ಪೊಲೀಸರು ಮಾತ್ರ ಮಾಸ್ಕ್ ಧರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ ಭಾಸ್ಕರ್ ರಾವ್ ಲಭ್ಯರಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು