‘ರೌಡಿ, ಜನಪ್ರತಿನಿಧಿ, ಅಧಿಕಾರಿಗಳಿಂದ ವ್ಯಾಜ್ಯ ಇತ್ಯರ್ಥ’

7
ಅಭಿವೃದ್ಧಿ ಕಡೆಗಣನೆ: ಪ್ರಧಾನ ಜಿಲ್ಲೆ ಮತ್ತು ಸೆಶೆನ್ಸ್‌ ನ್ಯಾಯಾಧೀಶರ ಅಸಮಾಧಾನ

‘ರೌಡಿ, ಜನಪ್ರತಿನಿಧಿ, ಅಧಿಕಾರಿಗಳಿಂದ ವ್ಯಾಜ್ಯ ಇತ್ಯರ್ಥ’

Published:
Updated:

ಬಳ್ಳಾರಿ: ‘ಸ್ಥಳೀಯ ಶೇ 80ರಷ್ಟು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಭಿವೃದ್ಧಿಯ ಕೆಲಸ ಮರೆತು ಸ್ಥಳೀಯ ವ್ಯಾಜ್ಯಗಳ ಇತ್ಯರ್ಥದಲ್ಲಿ ತೊಡಗಿದ್ದಾರೆ. ಸಮಾಜಘಾತುಕರಾದ ರೌಡಿಗಳೂ ಅದೇ ಕೆಲಸ ಮಾಡುತ್ತಿದ್ದಾರೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶ ಬಿ.ಸಿ.ಬಿರಾದಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕ ಅದಾಲತ್‌ನ ವ್ಯಾಜ್ಯ ಪ್ರಕರಣಗಳ ಇತ್ಯರ್ಥದಲ್ಲಿ 2010ರಲ್ಲಿ ಜಿಲ್ಲೆಯು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು. ನಂತರ ಆ ಸ್ಥಾನವನ್ನು ಪಡೆಯಲು ಆಗಿಲ್ಲ. ಏಕೆಂದರೆ, ಅದಾಲತ್‌ಗೆ ಬರಬೇಕಾಗಿದ್ದ ವ್ಯಾಜ್ಯಗಳನ್ನು ತಡೆದು ಸ್ಥಳೀಯರೇ ಇತ್ಯರ್ಥಪಡಿಸುತ್ತಿದ್ದಾರೆ’ ಎಂದು ದೂರಿದರು.

‘ವ್ಯಾಜ್ಯಗಳ ಇತ್ಯರ್ಥಕ್ಕಾಗಿಯೇ ನ್ಯಾಯಾಲಯವಿದೆ. ಅಲ್ಲಿಗೆ ಹೋಗಿ ಎಂದು ಜನರಿಗೆ ಹೇಳಬೇಕಾದ ಪೊಲೀಸರು, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಅಧಿಕಾರಿಗಳು ನ್ಯಾಯಾಲಯದ ಕೆಲಸದಲ್ಲಿ ಮೂಗು ತೂರಿಸುತ್ತಿದ್ದಾರೆ. ಹೆಚ್ಚುವರಿ ನ್ಯಾಯಾಲಯಗಳಂತೆ ವರ್ತಿಸುತ್ತಿದ್ದಾರೆ’ ಎಂದು ಹೇಳಿದರು.

‘ಇದನ್ನು ತಡೆಯಲು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುತ್ತಲೇ ಇದ್ದೇವೆ. ಸಭೆಗಳಿಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅಧೀನ ಅಧಿಕಾರಿಗಳನ್ನು ಕಳಿಸಿದ್ದಕ್ಕೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದರು.

‘ಇಡೀ ಜಿಲ್ಲಾಡಳಿತ ಜಿಲ್ಲಾಧಿಕಾರಿಯ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆಯೇ ಹೊರತು ಪ್ರಧಾನ ಜಿಲ್ಲಾ ಮತ್ತು ಸೆಶೆನ್ಸ್‌ ನ್ಯಾಯಾಧೀಶರ ಮಾತಿಗೆ ಅನುಗುಣಾಗಿ ಅಲ್ಲ. ಈ ಬಗ್ಗೆ ಅಂತಿಮವಾಗಿ ನಾವು ಸರ್ಕಾರಕ್ಕೆ ವರದಿ ಸಲ್ಲಿಸಬಹುದಷ್ಟೇ. ಆದರೆ ಸರ್ಕಾರ ಏನು ಮಾಡುತ್ತಿದೆ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಏನು ಮಾಡಿದರು ಎಂದು ಮಾಧ್ಯಮದವರಿಗೇ ಗೊತ್ತು’ ಎಂದು ಮಾರ್ಮಿಕವಾಗಿ ನುಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !