ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊಲೀಸರು ಬೆತ್ತಲೆಗೊಳಿಸಿ ಹಿಂಸೆ ಕೊಟ್ಟರು’

ಸಿಸಿಬಿ ವಿರುದ್ಧ ಎಸ್‌ಎಚ್‌ಆರ್‌ಸಿಗೆ ದೂರು ಕೊಟ್ಟ ಆಭರಣ ವ್ಯಾಪಾರಿ
Last Updated 9 ನವೆಂಬರ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಾರ್ದನ ರೆಡ್ಡಿ ವಿರುದ್ಧ ಹೇಳಿಕೆ ನೀಡಲು ನಿರಾಕರಿಸಿದ್ದಕ್ಕೆ ಸಿಸಿಬಿ ಪೊಲೀಸರು ನನ್ನನ್ನು ಬೆತ್ತಲೆಗೊಳಿಸಿ ಥಳಿಸಿದರು. ಕುಟುಂಬ ಸದಸ್ಯರನ್ನೂ ಆರೋಪಿಗಳನ್ನಾಗಿ ಮಾಡುವುದಾಗಿ ಬೆದರಿಸಿದರು’ ಎಂದು ಬಳ್ಳಾರಿಯ ‘ರಾಜ್‌ಮಹಲ್ ಜ್ಯುವೆಲರ್ಸ್’ ಮಾಲೀಕ ಎಸ್.ರಮೇಶ್ ಆರೋಪಿಸಿದ್ದಾರೆ.

‘ಆ್ಯಂಬಿಡೆಂಟ್’ ಕಂಪನಿ ವಂಚನೆ ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ರಮೇಶ್,‌ ‘ಸಿಸಿಬಿ ಡಿಸಿಪಿ ಎಸ್.ಗಿರೀಶ್ ಹಾಗೂ ಎಸಿಪಿ ಎಚ್‌.ಎನ್.ವೆಂಕಟೇಶ್‌ ಪ್ರಸನ್ನ ನನಗೆ ಚಿತ್ರಹಿಂಸೆ ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಎಸ್‌ಎಚ್‌ಆರ್‌ಸಿ) ಬುಧವಾರ ದೂರು ಕೊಟ್ಟಿದ್ದಾರೆ. ರಮೇಶ್ ಪರವಾಗಿ ‘ರಾಜ್ಯ ಜ್ಯುವೆಲರ್ಸ್‌ ಓನರ್ಸ್‌ ಫೆಡರೇಷನ್’ ಕೂಡ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಕೋಣೆಯಲ್ಲಿ ಕೂಡಿಟ್ಟರು: ಅ.27ರ ಬೆಳಿಗ್ಗೆ ಎಸಿಪಿ ವೆಂಕಟೇಶ್ ಪ್ರಸನ್ನರನ್ನು ಭೇಟಿಯಾದೆ. ಮೊಬೈಲ್ ಕಿತ್ತುಕೊಂಡು ನನ್ನನ್ನು ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಕಚೇರಿಗೆ ಕರೆದುಕೊಂಡು ಹೋದರು. ‘ಜನಾರ್ದನರೆಡ್ಡಿ ಹಾಗೂ ಆಲಿಖಾನ್ ಅವರ ಪರಿಚಯವಿದೆಯಾ’ ಎಂದು ಅಲೋಕ್ ಪ್ರಶ್ನಿಸಿದರು. ಅವರಿಬ್ಬರ ಜತೆ ಅನ್ಯೋನ್ಯ ಸಂಬಂಧವೇನಿಲ್ಲ ಎಂದು ಪ್ರತಿಕ್ರಿಯಿಸಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT