ಶುಕ್ರವಾರ, ನವೆಂಬರ್ 15, 2019
24 °C

ರಾಜ್ಯದ 1,446 ಪೊಲೀಸರಿಗೆ ಗಣ್ಯ ವ್ಯಕ್ತಿಗಳ ಭದ್ರತೆಯೇ ಕೆಲಸ!

Published:
Updated:
Prajavani

ಕರ್ನಾಟಕವೂ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಪೊಲೀಸ್ ಭದ್ರತೆ ಇರುವ ಗಣ್ಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಜತೆಗೆ ಈ ಕಾರ್ಯಕ್ಕೆ ಮಂಜೂರಾಗಿರುವ ಸಂಖ್ಯೆಗಿಂತಲೂ ಅಧಿಕ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ ಹೇಳಿದೆ.

* ದೇಶದ ಹಲವು ರಾಜ್ಯಗಳಲ್ಲಿ ಪೊಲೀಸ್‌ ಭದ್ರತೆ ಪಡೆಯುತ್ತಿರುವ ಗಣ್ಯರ ಸಂಖ್ಯೆಯಲ್ಲಿ ಇಳಿಕೆಯಾಗಿದೆ
* ಉತ್ತರ ಪ್ರದೇಶದಲ್ಲಿ ಇಂತಹ ಗಣ್ಯರ ಸಂಖ್ಯೆ 1,901ರಿಂದ 110ಕ್ಕೆ (ಶೇ 94.1ರಷ್ಟು) ಇಳಿಕೆಯಾಗಿದೆ
* ಆದರೆ ಅಸ್ಸಾಂ, ಪಂಜಾಬ್, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಇಂತಹ ಗಣ್ಯರ ಸಂಖ್ಯೆ ಏರಿಕೆಯಾಗಿದೆ
* ಕರ್ನಾಟಕದಲ್ಲಿ ಗಣ್ಯರ ಭದ್ರತೆಗೆ 260 ಪೊಲೀಸ್‌ ಸಿಬ್ಬಂದಿ ನಿಯೋಜನೆಗೆ ಮಂಜೂರಾತಿ ದೊರೆತಿದೆ. ಆದರೆ 1,446 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ
ಆಧಾರ: ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೊ

ಪ್ರತಿಕ್ರಿಯಿಸಿ (+)