‘ರಾಜಕೀಯ ಪ್ರವೇಶ; ಸದ್ಯಕ್ಕೆ ಆಸಕ್ತಿ ಇಲ್ಲ’ –ಮೈಸೂರು ರಾಜವಂಶಸ್ಥ ಯದುವೀರ್

7

‘ರಾಜಕೀಯ ಪ್ರವೇಶ; ಸದ್ಯಕ್ಕೆ ಆಸಕ್ತಿ ಇಲ್ಲ’ –ಮೈಸೂರು ರಾಜವಂಶಸ್ಥ ಯದುವೀರ್

Published:
Updated:
Prajavani

ಕಲಬುರ್ಗಿ: ‘ರಾಜಕೀಯ ಪ್ರವೇಶಕ್ಕೆ ಸದ್ಯಕ್ಕೆ ಯಾವುದೇ ಆಸಕ್ತಿ ಇಲ್ಲ’ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈಸೂರು ಸಂಸ್ಥಾನಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಸೌಜನ್ಯಯುತ ಭೇಟಿ ನೀಡುತ್ತಿರುತ್ತಾರೆ. ರಾಜಕೀಯಕ್ಕೆ ಬಂದೇ ಸಮಾಜ ಸೇವೆ ಮಾಡಬೇಕು ಎಂದೇನಿಲ್ಲ. ರಾಜಕೀಯ ಹೊರತಾಗಿಯೂ ಸಮಾಜ ಸೇವೆಯನ್ನು ಮಾಡಬಹುದು. ಈಗಾಗಲೇ ಮೈಸೂರು ಅರಮನೆ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಲಾಗುತ್ತಿದೆ’ ಎಂದರು.

‘ನನ್ನನ್ನು ಪ್ರವಾಸೋದ್ಯಮ ಇಲಾಖೆ ರಾಯಭಾರಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ರಾಯಭಾರಿಯನ್ನಾಗಿ ಮಾಡಿದಲ್ಲಿ ಕಲಬುರ್ಗಿ ಭಾಗದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಕಲಬುರ್ಗಿ ಕೋಟೆ, ಖಾಜಾ ಬಂದಾ ನವಾಜ್ ದರ್ಗಾ ವಿಶಿಷ್ಟವಾದ ಪ್ರೇಕ್ಷಣೀಯ ಸ್ಥಳಗಳಾಗಿವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !