ರಾಜಕೀಯ ಹೈಡ್ರಾಮಾ: ಮುಂಬೈಗೆ ತೆರಳಿದ ಸಚಿವ ಎಂ.ಟಿ.ಬಿ.ನಾಗರಾಜ್‌

ಭಾನುವಾರ, ಜೂಲೈ 21, 2019
21 °C

ರಾಜಕೀಯ ಹೈಡ್ರಾಮಾ: ಮುಂಬೈಗೆ ತೆರಳಿದ ಸಚಿವ ಎಂ.ಟಿ.ಬಿ.ನಾಗರಾಜ್‌

Published:
Updated:

ಬೆಂಗಳೂರು: ಸಚಿವ ಎಂ.ಟಿ.ಬಿ.ನಾಗರಾಜ್‌ ಅವರು ವಿಶೇಷ ವಿಮಾನದಲ್ಲಿ ಭಾನುವಾರ ಮುಂಬೈಗೆ ತೆರಳಿದರು ಎನ್ನಲಾಗಿದೆ.

ಕಾಂಗ್ರೆಸ್‌ ನಾಯಕರು ಅವರನ್ನು ಮನವೊಲಿಸಲು ದಿನವಿಡೀ ಸಂಧಾನ ನಡೆಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಡೆಸಿದ ಸಂಧಾನ ಫಲ ನೀಡಲಿಲ್ಲ.

ರಾತ್ರಿ 10 ಗಂಟೆ ವೇಳೆಗೆ ನಾಗರಾಜ್‌ ಮಾತನಾಡಿ, ತಾವು ಕಾಂಗ್ರೆಸ್‌ನಲ್ಲೇ ಉಳಿಯುವುದಾಗಿ ಪ್ರಕಟಿಸಿದರು. ಸುಧಾಕರ್‌ ಸೇರಿ ಉಳಿದ ಶಾಸಕರನ್ನು ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು. ನಂತರ ಶಾಸಕ ಸುಧಾಕರ್ ರಾಜೀನಾಮೆ ಹಿಂಪಡೆದರೆ ಮಾತ್ರ ತಾನು ರಾಜೀನಾಮೆ ವಾಪಾಸು ಪಡೆಯುವುದಾಗಿ ಹೇಳಿದ್ದರು. 

ಇಂದು ಬೆಳಗ್ಗೆ ದೋಸ್ತಿ ನಾಯಕರಿಗೆ ಊರಿನ ಜಾತ್ರೆಗೆ ಹೋಗಿ ಬರುವುದಾಗಿ ಹೇಳಿದ್ದ ಎಂ.ಟಿ.ಬಿ. ನಾಗರಾಜ್‌  ಎಚ್‌.ಎ.ಎಲ್‌ ವಿಮಾನ ನಿಲ್ದಾಣಕ್ಕೆ ತೆರಳಿದರು. ನಂತರ ವಿಶೇಷ ವಿಮಾನದ ಮೂಲಕ ಮುಂಬೈಗೆ ತೆರಳಿದರು. ಬಿಜೆಪಿಯ ಆರ್. ಅಶೋಕ್‌, ಎಸ್‌.ಆರ್. ವಿಶ್ವನಾಥ್ ಹಾಗೂ ಯಡಿಯೂರಪ್ಪ ಆಪ್ತ ಸಂತೋಷ್‌ ನಾಗರಾಜ್‌ ಮುಂಬೈಗೆ ತೆರಳಲು ಸಹಕರಿಸಿದರು.

ಆರ್. ಅಶೋಕ್‌ ಸಹ ನಾಗರಾಜ್ ಜೊತೆ ಮುಂಬೈಗೆ ತೆರಳಿದರು ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 20

  Happy
 • 3

  Amused
 • 3

  Sad
 • 3

  Frustrated
 • 13

  Angry

Comments:

0 comments

Write the first review for this !