ಸುಮಲತಾ ಗೆಲುವಿಗೆ ಹಂಪಿಯಲ್ಲಿ ವಿಶೇಷ ಪೂಜೆ

ಶನಿವಾರ, ಏಪ್ರಿಲ್ 20, 2019
32 °C

ಸುಮಲತಾ ಗೆಲುವಿಗೆ ಹಂಪಿಯಲ್ಲಿ ವಿಶೇಷ ಪೂಜೆ

Published:
Updated:
Prajavani

ಹೊಸಪೇಟೆ: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿದಿರುವ ಸುಮಲತಾ ಅವರ ಗೆಲುವಿಗೆ ಪ್ರಾರ್ಥಿಸಿ ಅಂಬರೀಶ್‌ ಅವರ ಅಭಿಮಾನಿಗಳು ಗುರುವಾರ ಇಲ್ಲಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ವಿರೂಪಾಕ್ಷೇಶ್ವರನಿಗೆ ರುದ್ರಾಭಿಷೇಕ ಮಾಡಿಸಿ, ನಂತರ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ‘ಸುಮಲತಾ ಅಕ್ಕನವರಿಗೆ ಜಯವಾಗಲಿ’ ಎಂದು ಹರಸಿದರು.

‘ಅಂಬರೀಶ್‌ ಅವರು ಒಬ್ಬ ನಟರಾಗಿ, ರಾಜಕಾರಣಿಯಾಗಿ ಈ ನಾಡಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಪತ್ನಿ ಚುನಾವಣಾ ಕಣದಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವುದು ಹೆಮ್ಮೆಯ ಸಂಗತಿ. ರಾಜಕೀಯ ಎಂದರೆ ಮಹಿಳೆಯರು ಸಾಮಾನ್ಯವಾಗಿ ದೂರ ಉಳಿಯುತ್ತಾರೆ. ಆದರೆ, ಸುಮಲತಾ ಅವರು ಧೈರ್ಯದಿಂದ ರಾಜಕೀಯ ಪ್ರವೇಶಿಸಿ, ಚುನಾವಣೆಗೆ ನಿಂತಿದ್ದಾರೆ. ಅವರು ಭಾರಿ ಬಹುಮತದೊಂದಿಗೆ ಗೆಲ್ಲಬೇಕೆಂದು ಹಾರೈಸಿ ವಿಶೇಷ ಪೂಜೆ ಮಾಡಿಸಿದ್ದೇವೆ’ ಎಂದು ಅಂಬರೀಶ್‌ ಅಭಿಮಾನಿ ಮಾದಿಗರ ವೀರೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಭಿಮಾನಿಗಳಾದ ನಂಜುಂಡಿ, ಹುಲುಗಪ್ಪ, ಚಂದ್ರು, ಲಕ್ಷ್ಮಣ, ಗುರುನಾಥ, ಕಿಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !