ಸೋಮವಾರ, ಫೆಬ್ರವರಿ 24, 2020
19 °C

ಸಚಿವನ ಮಗನಿಂದ ಅಪಘಾತ ಆರೋಪ | ತರಾತುರಿಯಲ್ಲಿ ನಡೆದಿತ್ತೇ ಮರಣೋತ್ತರ ಪರೀಕ್ಷೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಸಚಿವರ ಮಗನೊಬ್ಬನಿಂದ ನಡೆದಿತ್ತು ಎನ್ನಲಾದ ಅಪಘಾತದಲ್ಲಿ ಕಾರಿನಲ್ಲಿದ್ದ ಐವರ ಪೈಕಿ ಸಚಿನ್‌ ಎಂಬುವವರೂ ಮೃತಪಟ್ಟಿದ್ದರು. ಅವರ ಮರಣೋತ್ತರ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಿ, ಶವವನ್ನು ಬೇಗ ಕಳುಹಿಸಿಕೊಟ್ಟಿರುವುದು ಗೊತ್ತಾಗಿದೆ.

‘ಸಚಿವ ಆರ್‌. ಅಶೋಕ್‌ ಕಡೆಯವರು ಎಂದಿದ್ದಕ್ಕೆ ತಕ್ಷಣವೇ ಅಪಘಾತದಲ್ಲಿ ಗಾಯಗೊಂಡಿದ್ದ ಎಲ್ಲರಿಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೆವು. ಸಚಿನ್‌ ಅವರ ಮೃತದೇಹವನ್ನು ಬೇಗ ಬೆಂಗಳೂರಿಗೆ ತೆಗೆದುಕೊಂಡು ಹೋಗಬೇಕು ಎಂದು ಒತ್ತಡ ಹೇರಿದ್ದಕ್ಕೆ ರಾತ್ರಿಯೇ ಮರಣೋತ್ತರ ಪರೀಕ್ಷೆ ಮಾಡಿ ಕಳುಹಿಸಿಕೊಟ್ಟೆವು. ರಾಕೇಶ್‌ ಎಂಬುವರ ಬೆನ್ನು ಮೂಳೆ ಮುರಿದರೆ, ಶಿವಕುಮಾರ, ರಾಹುಲ್‌ ಹಾಗೂ ವರುಣ್‌ಗೆ ಸಣ್ಣ ಗಾಯಗಳಾಗಿದ್ದವು. ಎಲ್ಲರಿಗೂ ಪ್ರಾಥಮಿಕ ಚಿಕಿತ್ಸೆ ನೀಡಿದ್ದೆವು. ಬೆಳಿಗ್ಗೆ ಹೋಗುವಂತೆ ತಿಳಿಸಿದ್ದರೂ ಅವರು ರಾತ್ರಿಯೇ ಅವಸರದಲ್ಲಿ ಹೊರಟು ಹೋದರು’ ಎಂದು ಡಾ. ಮಹಾಂತೇಶ್‌ ತಿಳಿಸಿದ್ದಾರೆ. 

ಇದರೊಂದಿಗೆ, ಮರಣೋತ್ತರ ಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಲಾಗಿತ್ತೇ ಎಂಬ ಅನುಮಾನ ಮೂಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು