ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಡೊ: ಭಾರತಕ್ಕೆ 10 ಚಿನ್ನದ ಪದಕ

Last Updated 23 ಏಪ್ರಿಲ್ 2018, 20:10 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಜೂಡೊ ಸ್ಪರ್ಧಿಗಳು ಭಾನುವಾರ ಮುಕ್ತಾಯಗೊಂಡ ಎಂಟನೇ ದಕ್ಷಿಣ ಏಷ್ಯನ್‌ ಸೀನಿಯರ್‌ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ  10 ಚಿನ್ನದ ಪದಕ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಸ್ಪರ್ಧೆಯಲ್ಲಿದ್ದ ಎಲ್ಲ ಏಳು ಮಹಿಳಾ ಜೂಡೊ ಆಟಗಾರರರು ಚಿನ್ನ ಗೆದ್ದು ಅಮೋಘ ಸಾಧನೆ ಮಾಡಿದ್ದಾರೆ. ಪುರುಷ ತಂಡದ ಮೂವರು ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಚಿನ್ನದ ಪದಕ ಪಡೆದವರು: ಎಲ್‌. ಸುಶೀಲಾ ದೇವಿ (48 ಕೆ.ಜಿ.),  ಟಿ. ಕಲ್ಪನಾ ದೇವಿ (52 ಕೆ.ಜಿ.), ಎ. ಅನಿತಾ ಚಾನು (57 ಕೆ.ಜಿ.), ಎಚ್‌. ಸುನಿಬಾಲಾ ದೇವಿ (63 ಕೆ.ಜಿ.), ಗರಿಮಾ ಚೌಧರಿ (70 ಕೆ.ಜಿ.), ಸಿ. ಜೀನಾ ದೇವಿ (78 ಕೆ.ಜಿ.), ಟುಲಿಕಾ ಮಾನ್‌ (78 ಕೆ.ಜಿ.), ವಿಜಯ್‌ ಕುಮಾರ್‌ ಯಾದವ್‌ (60 ಕೆ.ಜಿ.), ಅಜಯ್‌ ಯಾದವ್‌ (73 ಕೆ.ಜಿ.), ದಿವೇಶ್‌ (81 ಕೆ.ಜಿ.)

ಕಂಚಿನ ಪದಕ ಪಡೆದವರು: ಅಂಕಿತ್‌ ಬಿಷ್ಟ್‌ (66 ಕೆ.ಜಿ.), ಜೋಬನ್‌ದೀಪ್‌ ಸಿಂಗ್‌ (90 ಕೆ.ಜಿ.), ಉದಯ್‌ವೀರ್‌ ಸಿಂಗ್‌ (100 ಕೆ.ಜಿ.).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT