ಅ‍ಬ್ಬರದ ಪ್ರಚಾರಕ್ಕೆ ತೆರೆ

ಭಾನುವಾರ, ಏಪ್ರಿಲ್ 21, 2019
26 °C

ಅ‍ಬ್ಬರದ ಪ್ರಚಾರಕ್ಕೆ ತೆರೆ

Published:
Updated:
Prajavani

ಹಾಸನ: ದೇವೇಗೌಡ ಕುಟುಂಬದ ಮೂರನೇ ತಲೆಮಾರಿನ ಪ್ರಜ್ವಲ್‌ ರೇವಣ್ಣ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಉಭಯ ಪಕ್ಷಗಳ ಅಬ್ಬರದ ಪ್ರಚಾರಕ್ಕೆ ಮಂಗಳವಾರ ತೆರೆ ಬಿತ್ತು.

ಕೊನೆಯ ದಿನದಂದು ಪ್ರಚಾರದ ಭರಾಟೆ ತಾರಕಕ್ಕೇರಿತು. ಮೈತ್ರಿ ಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಸನ ನಗರದಲ್ಲಿ ಭರ್ಜರಿ ರೋಡ್‌ ಷೋ ನಡೆಸಿದರು. ಸಚಿವ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ಕಾಂಗ್ರೆಸ್‌ ಮುಖಂಡರು ಸಾಥ್‌ ನೀಡಿದರು. ಮತ್ತೊಂದೆಡೆ ಬಿಜೆಪಿ ಅಭ್ಯರ್ಥಿ ಎ.ಮಂಜು ಸಹ ವಿವಿಧ ಸಮುದಾಯದ ಮುಖಂಡರ ಮನೆಗಳಿಗೆ ಭೇಟಿ ನೀಡಿ ಮತ ಯಾಚಿಸಿದರು.

ರೇವಣ್ಣ ತಮ್ಮ ಪುತ್ರನ ಭವಿಷ್ಯ ರೂಪಿಸಲು ಕಾಂಗ್ರೆಸ್‌ ಮುಖಂಡರನ್ನು ವಿಶ್ವಾಸಕ್ಕೆ ತಗೆದುಕೊಂಡು ಜಂಟಿ ಪ್ರಚಾರ ನಡೆಸಿದರು. ಸಂಸದ ಎಚ್‌.ಡಿ. ದೇವೇಗೌಡ ಅವರು ಬಿರು ಬಿಸಿಲಿನಲ್ಲೂ ನಾಲ್ಕು ಬಾರಿ ಕ್ಷೇತ್ರದಲ್ಲಿ ಸಂಚರಿಸಿದರು. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಮಂಜು ಪರವಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಳವಿಕಾ, ತಾರಾ, ಎಸ್‌.ಎಂ.ಕೃಷ್ಣ ಪ್ರಚಾರ ನಡೆಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !