ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Phone-In | ‘ಲಾಕ್‌ಡೌನ್ ಮತ್ತೆ ಸಿಗದು, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಿ’

Last Updated 27 ಏಪ್ರಿಲ್ 2020, 8:17 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್–19 ಸೋಂಕು ಭೀತಿಯಿಂದಾಗಿ ಸದ್ಯ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯಗಳ ಪ್ರಮಾಣ ಏರಿಕೆಯಾಗುತ್ತಿರುವ ಬಗ್ಗೆ ಸಾಕಷ್ಟು ವರದಿಯಾಗಿದೆ. ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸಲ್ಲಿಕೆಯಾಗಿವೆ.

ಇವುಗಳನ್ನು ಗಮನದಲ್ಲಿರಿಸಿ ‘ಪ್ರಜಾವಾಣಿ’ ಫೋನ್‌ ಇನ್ ಅಯೋಜಿಸಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಭಾಗವಹಿಸಿರುವ ಈ ಕಾರ್ಯಕ್ರಮವು ಪ್ರಜಾವಾಣಿ ಫೇಸ್‌ಬುಕ್‌ ಖಾತೆಯಲ್ಲಿ ಲೈವ್‌ ಆಗುತ್ತಿದೆ. 080 45557230 ದೂರವಾಣಿ ಸಂಖ್ಯೆಗೆ ಕರೆ ಮಾಡಿ, ನಿಮ್ಮ ಸಮಸ್ಯೆ ಹೇಳಿಕೊಳ್ಳಿ.

ಪ್ರಶ್ನೆ: ಮಹಿಳೆಯರಿಗೆ ಆಗುವ ದೌರ್ಜನ್ಯವಷ್ಟೇ ಕೌಟುಂಬಿಕ ದೌರ್ಜನ್ಯವೇ?

ಉತ್ತರ: ಇಬ್ಬರನ್ನೂ ಕರೆಸಿ ಕೌನ್ಸಲಿಂಗ್‌ ಮಾಡಲಾಗುತ್ತದೆ. ಇಬ್ಬರ ಜಗಳದ ನಡುವಿನ ಜಗಳ ಸಾಮಾನ್ಯ. ಇಂತಹ ಸಂದರ್ಭದಲ್ಲಿ ನಾವು ನೇರವಾಗಿ ಎಫ್‌ಐಆರ್‌ ದಾಖಲಿಸುವುದಿಲ್ಲ. ಇಬ್ಬರೊಂದಿಗೆ ಮಾತುಕತೆ ನಡೆಸುತ್ತೇವೆ. ಇಬ್ಬರ ಜೊತೆಕರೆಸಿ ಮಾತುಕತೆ ನಡೆಸಲಾಗುತ್ತದೆ. ಅದಾಗ್ಯೂ ಸಾಧ್ಯವಾಗದಿದ್ದರೆ ಮಾತ್ರವೇ ಮುಂದಿನ ಕ್ರಮ ಕೈಗೊಳ್ಳುವುದು.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನಾವು ರಕ್ಷಣೆ ನೀಡುತ್ತೇವೆಯೇ ಹೊರತು, ಮಹಿಳಾ ಆಯೋಗ ಪುರುಷ ವಿರೋಧಿಯಲ್ಲ. ಕೌನ್ಸಿಲಿಂಗ್‌ ಇಲ್ಲದೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.

‘ನಾಗಮಂಗಲದಲ್ಲಿ ಓದುತ್ತಿದ್ದ ತಂಗಿ ಅಪಹರಣಕ್ಕೊಳಗಾಗಿದ್ದಾಳೆ. ದೂರು ನೀಡಿದ್ದರೂ ಕ್ರಮವಿಲ್ಲ’ ಎಂದು ತುಮಕೂರಿನಿಂದ ಕರೆ ಮಾಡಿದ ಮಹಿಳೆಯೊಬ್ಬರು ದೂರು ನೀಡಿದರು. ಅವರೊಂದಿಗೆ ಮಾತನಾಡಿದ ಪ್ರಮೀಳಾ ಅವರು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ದಿನವೇ ಮಾತುಕತೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

**

ಪ್ರಶ್ನೆ: ದೇವದಾಸಿ ಮಹಿಳೆಯರಿಗೆ ವಸತಿಯಿಲ್ಲ, ಅವರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬಹುದಲ್ಲವೇ?

ಉತ್ತರ: ದೇವದಾಸಿಯರು ಎಲ್ಲೆಡೆ ಇದ್ದಾರೆ. ಬಾಗಲಕೋಟೆ ಕಡೆ ಹೆಚ್ಚಾಗಿದ್ದಾರೆ, ಈ ಬಗ್ಗೆ ಸಮೀಕ್ಷೆ ಮಾಡಲಾಗಿದೆ. ಅವರಿಗೆ ಮೂಲಭೂತ ಅವಶ್ಯಕ ಸಾಮಗ್ರಿಗಳನ್ನು ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಪುನರ್ವಸತಿ ಕಾರ್ಯಕ್ರಮಗಳಿವೆ. ಇನ್ಫೋಸಿಸ್‌ ಸುಧಾಮೂರ್ತಿ ಅವರೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ದೇವದಾಸಿಯರ ಶ್ರೇಯಕ್ಕಾಗಿ, ಸಾಲ ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ.

**

ಪ್ರಶ್ನೆ: ಲಾಕ್‌ಡೌನ್‌ ಅವಧಿಯಲ್ಲಿ ಕೌಟುಂಬಿಕ ನೆಮ್ಮದಿ ಹೇಗೆ?

ಉತ್ತರ: ಕುಟುಂಬದ ಎಲ್ಲರೂ ಸಂವೇದನೆಯಿಂದ ವರ್ತಿಸಬೇಕು. ಇಂತಹ (ಲಾಕ್‌ಡೌನ್‌) ಸಮಯ ಮತ್ತೆ ಸಿಗದು. ಕೆಲಸದ ನಡುವೆ ಸಾಕಷ್ಟು ವಿಚಾರಗಳನ್ನು ಮರೆತಿರುತ್ತೀರಿ. ಆರೋಗ್ಯದ ಕಡೆ ಗಮನ ಹರಿಸಿ. ಪ್ರತಿನಿತ್ಯ ಒಳ್ಳೆಯ ವಿಚಾರಗಳ ಬಗ್ಗೆ ಚರ್ಚೆ ಮಾಡಿ ಖುಷಿಯಾಗಿರಿ.

ಒಳ್ಳೆಯ ಪುಸ್ತಕಗಳನ್ನು ಓದಿ. ಹಿರಿಯರೊಟ್ಟಿಗೆ ಸಮಾಲೋಚನೆ ನಡೆಸಿ. ಜೊತೆಯಲ್ಲಿ ಟಿವಿ ನೋಡಿ. ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕಲು ಇದು ಒಳ್ಳೆಯ ಸಮಯ.

ಶಿವಾಜಿ ಮಹಾರಾಜರನ್ನು ಸೃಷ್ಟಿಸಿದ ಜೀಜಾಬಾಯಿಯಂಥವರು ಸ್ಫೂರ್ತಿಯಾಗಲಿ

ಪ್ರಶ್ನೆ: ನಾನು ಮದುವೆಯಾಗಿ 15 ವರ್ಷ ಆಗಿದೆ. ಮನೆಯಲ್ಲಿಸಣ್ಣ–ಪುಟ್ಟ ವಿಚಾರಕ್ಕೆ ಜಗಳವಾದರೂ ನನ್ನ ಪತಿ ವರದಕ್ಷಿಣ ವಿಚಾರವಾಗಿ ಚುಚ್ಚುಮಾತನಾಡುತ್ತಾರೆ. ನಾನು ಏನ್‌ ಮಾಡ್ಬೇಕು?

ಉತ್ತರ: ನೀವು ಅಳಲು ತೋಡಿಕೊಂಡಿದ್ದು ತುಂಬಾ ಒಳ್ಳೆಯದು. ಏಕೆಂದರೆ ಹೆಚ್ಚಿನವರು ಈ ವಿಚಾರವನ್ನು ಹೇಳಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಆತ್ಮಹತ್ಯೆಯ ಯೋಚನೆ ಮಾಡ್ಬೇಡಿ. ಅದು ಹೇಡಿತನ ಬೇಡ. ಗುಡಿಸಲಿನಲ್ಲಿರುವ ಮಹಿಳೆಯರೂ ತಮ್ಮ ಮಕ್ಕಳನ್ನ ಚೆನ್ನಾಗಿ ಓದಿಸಿ ದೊಡ್ಡವರನ್ನಾಗಿ ಮಾಡಿದ ಉದಾಹರಣೆಗಳಿವೆ.

ಶಿವಾಜಿ ಮಹಾರಾಜರನ್ನು ಸೃಷ್ಟಿಸಿದ ಜೀಜಾಬಾಯಿಯಂಥವರು ಸ್ಫೂರ್ತಿಯಾಗಬೇಕು. ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ನಿಮ್ಮ ಪಾಡಿಗೆ ನೀವಿರಿ.ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ನೀವು ನಿಮ್ಮ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಓದಿಕೊಂಡಿದ್ದೀರಿ ಎಂದರೆ ಹಾಗೂ ಮನೆಯಲ್ಲಿ ಹೊರಗೆ ಕಳುಹಿಸುವುದಾದರೆ ಕೆಲಸಕ್ಕೆ ಪ್ರಯತ್ನಿಸಿ. ಇಲ್ಲವಾದರೆ, ಮನೆಯಲ್ಲೇ ಕುಳಿತು ಏನನ್ನಾದರೂ ಮಾಡಲು ಪ್ರಯತ್ನಿಸಿ. ಆತ್ಮ ವಿಶ್ವಾಸ ಕಳೆದುಕೊಳ್ಳದಿರಿ.

**

ಪ್ರಶ್ನೆ:ನನ್ನ ಗಂಡ ಈಗಾಗಲೇ ಮದುವೆಯಾಗಿದ್ದರು. ಈ ವಿಚಾರ ನಾನು ಮದುವೆಯಾದ 10 ತಿಂಗಳ ನಂತರ ಗೊತ್ತಾಯಿತು. ಇದೀಗ ನನ್ನ ಗಂಡ ಮೊದಲ ಹೆಂಡತಿ ಮನೆಯಲ್ಲಿದ್ದಾರೆ. ಕಳೆದ 6 ತಿಂಗಳಿಂದ ಅವರ ಮೊದಲ ಹೆಂಡತಿ ಮತ್ತು ಮಕ್ಕಳು ನನ್ನ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಪೊಲೀಸ್‌ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

ಉತ್ತರ: ಇದು ಮೋಸದ ಮದುವೆಯಾಗಿರುವುದರಿಂದ, ನಿಮ್ಮ ಗಂಡನಿಗೆ ಖಂಡಿತ ಶಿಕ್ಷೆಯಾಗಲಿದೆ. ನಿಮ್ಮ ಜೀವನಾಧಾರಕ್ಕೆ ನೀಡಬೇಕಿರುವ ಪರಹಾರವನ್ನು ಕೊಡಿಸಲಾಗುವುದು. ಲಾಕ್‌ಡೌನ್‌ ಮುಗಿಯುವವರೆಗೆ ನಿಮ್ಮ ಜೀವನ ನಿರ್ವಹಣೆಗೆಬೇಕಾದ ಎಲ್ಲವನ್ನೂ ಒದಗಿಸಲಾಗುವುದು. ಕೂಡಲೇ ಕ್ರಮಕೈಗೊಳ್ಳಲಾಗುವುದು.

**

ಪ್ರಶ್ನೆ: ನನಗೆ ಮದುವೆಯಾಗಿಲ್ಲ. ನಮ್ಮಣ್ಣ ಅಪ್ಪನ ಆಸ್ತಿಯಲ್ಲಿ ಪಾಲು ನೀಡುತ್ತಿಲ್ಲ ಏನು ಮಾಡೋದು?

ಉತ್ತರ: ಈ ಬಗ್ಗೆ ಮಹಿಳಾ ಆಯೋಗಕ್ಕೆ ಒಂದು ದೂರು ನೀಡಿ. ನಿಮಗೆ ಉಚಿತವಾಗಿ ಕಾನೂನಿನ ನೆರವು ಮತ್ತು ಸಲಹೆ ಸಿಗುತ್ತದೆ.

**

ಪ್ರಶ್ನೆ: ನನ್ನ ಅಕ್ಕ ಬ್ಯಾಂಕ್‌ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು, ‘ಕೆಲಸ ಬಿಟ್ಟು ಬರುವುದಾದರೆ ಬಾ, ಇಲ್ಲವಾದರೆ ಬೇಡ’ ಎಂದು ಭಾವ ಬೆಂಗಳೂರು ಬಿಟ್ಟು ಊರಿಗೆ ಹೋಗಿದ್ದಾರೆ.

ಉತ್ತರ: ಮಹಿಳಾ ಆಯೋಗಕ್ಕೆ ಪತ್ರ ಬರೆಯಿರಿ. ನಿಮ್ಮ ಅಕ್ಕ ಮತ್ತು ಭಾವನ ಸಂಪರ್ಕ ಸಂಖ್ಯೆಯನ್ನು ಪತ್ರದಲ್ಲಿ ಬರೆಯಿರಿ. ಇಬ್ಬರೊಂದಿಗೆ ಮಾತನಾಡಲಾಗುವುದು. ಕೌನ್ಸಲಿಂಗ್‌ ನಡೆಸಿ, ಕ್ರಮ ಕೈಗೊಳ್ಳಲಾಗುವುದು.

**

ಪ್ರಶ್ನೆ: ಯುವತಿಯೊಬ್ಬರಿಗೆ ಮದುವೆಯಾಗದೆ ಮಗುವಾಗಿದೆ, ಇದಕ್ಕೆ ಕಾರಣವಾದ ವ್ಯಕ್ತಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಏನ್‌ ಮಾಡೋದು?

ಉತ್ತರ: ಮಗುವಿನ ಶಿಕ್ಷಣ ಮತ್ತು ನಿರ್ವಹಣೆ ವ್ಯಕ್ತಿಯಿಂದ ಪರಹಾರದ ಹಣ ಸಿಗಲೇಬೇಕು. ಲೀವಿಂಗ್ ರಿಲೇಷನ್‌ಗೆ ಸಂಬಂಧಿದಂತೆ ದೂರು ದಾಖಲಿಸಬಹುದು. ಈ ಬಗ್ಗೆ ಮಹಿಳಾ ಆಯೋಗಕ್ಕೆ ಪತ್ರ ಬರೆಯಿರಿ.

ಯುವತಿಗೆ ಆಯೋಗದ ವತಿಯಿಂದ ಉಚಿತ ಕಾನೂನು ನೆರವು ಮತ್ತು ಉಚಿತ ಕಾನೂನು ಸಲಹೆ ನೀಡಲಾಗುತ್ತದೆ.9902110455 ಗೆ ಕರೆ ಮಾಡಿ ಸಂಪರ್ಕಿಸಿ ಹೆಚ್ಚಿನ ವಿವರ ಪಡೆದುಕೊಳ್ಳಿ.

**

ಪ್ರಶ್ನೆ: ಉತ್ತಮ ಕೌಟುಂಬಿಕ ಸಂವಹನದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಬಾರದೇಕೆ?

ಉತ್ತರ: ಈಗಾಗಲೇ ಇಂತಹ ಕಾರ್ಯ ಮಾಡಲಾಗುತ್ತಿದೆ. ಕೋವಿಡ್‌–19 ಮುಗಿದ ನಂತರ ಈ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುವುದು.

**

ಪ್ರಶ್ನೆ: ಮಹಿಳಾ ಆಯೋಗದಿಂದ ಉಪಯೋಗವೇನು?

ಉತ್ತರ: ಮಹಿಳಾ ಆಯೋಗದಲ್ಲಿ ಕಾನೂನು ಅರಿವು ನೀಡಲಾಗುತ್ತದೆ. ದೂರು ದಾಖಲಿಸುವ ಸಂಬಂಧ ಉಚಿತವಾಗಿ ಕಾನೂನಿನ ಸಲಹೆ ನೀಡಲಾಗುವುದು. ದೂರು ದಾಖಲಿಸಲು ಯಾವೆಲ್ಲ ದಾಖಲೆಗಳು ಬೇಕು ಎಂಬ ತಿಳಿಸಲಾಗುತ್ತದೆ.ಉಚಿತ ಕಾನೂನು ಸಲಹೆ ನೀಡಲಾಗುವುದು. ಇದಕ್ಕೆ ಸಂಬಂಧಿಸಿದಂತೆಕಾರ್ಯಾಗಾರಗಳಿರುತ್ತವೆ.

ಹೆಣ್ಣುಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ, ಕಾರ್ಯಾಗಾರಗಳನ್ನು ನಡೆಸಲಾಗುವುದು. ಉದಾಹರಣೆಗೆ,ಹೊರಗೆ ಒಬ್ಬಂಟಿಯಾಗಿ ಹೋಗುವಾಗ ಕೈಗೋಳ್ಳಬೇಕಾದ ಮುಂಚಾಗ್ರತೆಗಳೇನು? ಎಂಬುದನ್ನು ತಿಳಿಸಿಕೊಡಲಾಗುವುದು. ಉದಾಹರಣೆಗೆ,ಪೆಪ್ಪರ್‌ ಸ್ಪ್ರೇ, ಎಲೆಕ್ಟ್ರಿಕ್‌ ಡಿವೈಸ್‌ಗಳನ್ನು ಬಳಸುವುದುಹೇಗೆ ಇತ್ಯಾದಿ ಮಾಹಿತಿ ನೀಡಲಾಗುವುದು.

ಮಾನಸಿಕ ದೌರ್ಜನ್ಯದ ಬಗ್ಗೆ..
ಮಾನಸಿಕ ದೌರ್ಜನ್ಯವನ್ನು ಕೌಟುಂಬಿಕ ದೌರ್ಜನ್ಯ ಎನ್ನುವ ಮೊದಲು ಮಹಿಳೆಗೆ ಮದುವೆಯಾಗಿದಯೇ ಇಲ್ಲವೇ ಎಂಬುದು ಮುಖ್ಯಾಗುತ್ತದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದು ಇಲ್ಲವೇ, ಮಹಿಳಾ ಆಯೋಗಕ್ಕೆ ಪತ್ರ ಬರೆದರೆ ಪರಿಶೀಲಿಸಲಾಗುವುದು.

**

ಪ್ರಶ್ನೆ: ಮಗ ಮತ್ತು ಸೊಸೆ ಕೆಲದಿನ ಚೆನ್ನಾಗಿ ಇರ್ತಾರೆ. ಇದ್ದಕ್ಕಿದ್ದಂತೆ ಜಗಳ ಮಾಡಿಕೊಳ್ತಾರೆ. ಈ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಬಗ್ಗೆ ನಾನು ಹೇಳಿದರೆ, ಸೊಸೆಗೆ ದೊಡ್ದ ತಪ್ಪಾಗಿ ಕಾಣುತ್ತಿದೆ. ನನಗೂ ವಯಸ್ಸಾಗಿದೆ. ಏನು ಮಾಡಲಿ?

ಉತ್ತರ:ಆಯೋಗಕ್ಕೆ ಕರೆ ಮಾಡಿ ಅಥವಾಪತ್ರ ಬರೆಯಿರಿ.ನಿಮ್ಮ ಮಗ ಮತ್ತು ಸೊಸೆಯನ್ನು ಕೌನ್ಸಲಿಂಗ್‌ ಮಾಡಲಾಗುವುದು. ಸಮಸ್ಯೆ ಪರಿಹರಿಸಲಾಗುವುದು. ನಿಮಗೆ ರಕ್ಷಣೆ ಬೇಕಿದ್ದರೆ ತಿಳಿಸಿ.

ಆಯೋಗದ ಯೋಜನೆಗಳೇನು?
* ಮಹಿಳಾ ಆಯೋಗವೆಂದರೆ ಮಹಿಳೆಯರಿಗೆ ಮಾತ್ರವೇ ನರವಾಗಲಿದೆ ಎಂದರ್ಥವಲ್ಲ.ಇಬ್ಬರೂ (ಗಂಡ–ಹೆಂಡತಿ)ಒಟ್ಟಾಗಿ ಚೆನ್ನಾಗಿ ಬಾಳಬೇಕು ಎಂಬುದೇ ನಮ್ಮ ಉದ್ದೇಶ. ಇದು ಪ್ರತಿಯೊಬ್ಬರಿಗೂ ತಲುಪಬೇಕು.ರಾಜ್ಯದ ಪ್ರತಿಯೊಂದು ಮನೆಗೂ, ಮಹಿಳೆಗೂ ಕಾನೂನಿನ ಅರಿವು ಮತ್ತು ನೆರವು ತಲುಪುವಂತೆ ಮಹಿಳಾ ಆಯೋಗ ಕೆಲಸ ಮಾಡಲಿದೆ.

* ಲೀವಿಂಗ್‌ ರಿಲೇಷನ್‌ಷಿಪ್‌ (ಸಹಜೀವನ) ಎಂಬುದು ಕಾಲೇಜು ವಿದ್ಯಾರ್ಥಿಗಳಲ್ಲಿಫ್ಯಾಷನ್‌ ಆಗುತ್ತಿದೆ.ಈ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರ ಮಾಡಲಾಗುವುದು.

* ಶಾಲಾ–ಕಾಲೇಜು ಹಂತದಲ್ಲಿ ಹೆಣ್ಣು ಮಕ್ಕಳಿಗೆ ಸ್ವಯಂ ರಕ್ಷಣೆಗಾಗಿ ಕರಾಟೆ ಅಥವಾ ಇನ್ನತರ ವಿಚಾರಗಳ ತರಬೇತಿ ನೀಡುವ ಯೋಜನೆಗಳನ್ನು ರೂಪಿಸುವುದು, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು.

* ಏನೇ ಆದರೂ ಮಹಿಳೆಯರ ರಕ್ಷಣೆಗೆ ಮಹಿಳಾ ಆಯೋಗವಿದೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಅರಿವು ಮೂಡಿಸುವುದು. ಮಹಿಳಾ ಆಯೋಗಕ್ಕಾಗಿ ಪ್ರತ್ಯೇಕಅ್ಯಪ್‌ ರೂಪಿಸಲಾಗುವುದು.

ದೌರ್ಜನ್ಯ ಸಂಬಂಧ ದೂರು ನೀಡುವುದಿದ್ದರೆ, ಮಕ್ಕಳ ರಕ್ಷಣಾಧಿಕಾರಿಗಳು ಮತ್ತು ಪೊಲೀಸ್‌ ಠಾಣೆಗೆ ದೂರು ನೀಡಿ. ಇಲ್ಲವೇ ಮಹಿಳಾ ಆಯೋಗಕ್ಕೆ ನೇರವಾಗಿ ದೂರು ಸಲ್ಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT