ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎಗೆ ಬಹುಮತ ಕೊಟ್ಟಿರುವ ಮತಗಟ್ಟೆ ಸಮೀಕ್ಷೆಗಳಿಗೆ ನೆಟ್ಟಿಗರ ಮೆಚ್ಚುಗೆ 

Last Updated 20 ಮೇ 2019, 6:28 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಲ್ಲಿಈ ಬಾರಿಯೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವೇ ಸರ್ಕಾರ ರಚಿಸಲಿದೆ ಎಂಬ ಸುದ್ದಿ ಸಂಸ್ಥೆಗಳ, ಸಮೀಕ್ಷಾ ಏಜನ್ಸಿಗಳ ಭವಿಷ್ಯವಾಣಿಗೆ ನೆಟ್ಟಿಗರು ಸಂತಸಗೊಂಡಿದ್ದಾರೆ.

ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಭಾನುವಾರ ಸಂಜೆ ಸಂಪನ್ನಗೊಳ್ಳುತ್ತಲೇ ವಿವಿಧ ಸಮೀಕ್ಷೆಗಳು ಪ್ರಕಟವಾಗಿದ್ದವು. ಬಹುತೇಕ ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಬಹುಮತ ಸಿಗುವ ಮುನ್ಸೂಚನೆ ಸಿಕ್ಕಿತ್ತು. ಇದೇ ಹಿನ್ನೆಲೆಯಲ್ಲಿ ಎನ್‌ಡಿಎಗೆ ಬಹುಮತ ಕೊಟ್ಟಿರುವ ಬಹುತೇಕ ಮತಗಟ್ಟೆ ಸಮೀಕ್ಷೆಗಳ ವರದಿ ಸರಿಯಿದೆಯೇ?ಎಂದು ಪ್ರಶ್ನೆ ಕೇಳಿ ಪ್ರಜಾವಾಣಿ ಮಾಡಿದ್ದ ಆನ್‌ಲೈನ್‌ ಪೋಲಿಂಗ್‌ನಲ್ಲಿ ಶೇ.67ರಷ್ಟು ಮಂದಿ ಹೌದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಮೂಲಕ ಅರ್ಧಕ್ಕಿಂತಲೂ ಹೆಚ್ಚು ಮಂದಿ ಸಮೀಕ್ಷೆಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ ಕ್ರಿಯೇಟ್‌ ಮಾಡಲಾಗಿದ್ದ ಈ ಆನ್‌ಲೈನ್‌ ಪೋಲಿಂಗ್‌ನಲ್ಲಿ ಬೆಳಗ್ಗೆ 11 ಗಂಟೆ ಹೊತ್ತಿಗೆ 7100 ಮಂದಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಲ್ಲಿ 4.7 ಸಾವಿರ ಮಂದಿ ಸಮೀಕ್ಷಾ ವರದಿ ಸರಿ ಇದೆ ಎಂದೂ, 2.3ಸಾವಿರ ಮಂದಿ ಸರಿ ಇಲ್ಲ ಎಂದೂ ಮತ ಹಾಕಿದ್ದಾರೆ. ಈ ಪೋಲ್‌ ಇನ್ನೂ 8 ಗಂಟೆಗಳ ಕಾಲ ಇರಲಿದ್ದು ನೀವೂ ಕೂಡ ಮತ ಹಾಕಬಹುದು.

ಭಾನುವಾರ ಸಂಜೆ ಪ್ರಕಟವಾಗಿದ್ದ ಮತಗಟ್ಟೆ ಸಮೀಕ್ಷೆಗಳಲ್ಲಿ ಎನ್‌ಡಿಎಗೆ ಬಹುಮತ ಬರುವುದಾಗಿಯೂ, ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆಯಾಗುವುದಾಗಿಯೂ ಹೇಳಲಾಗಿತ್ತು. ಹಲವು ಸಮೀಕ್ಷೆಗಳು ಎನ್‌ಡಿಎ 300ರ ಗಡಿ ದಾಟುವುದಾಗಿಯೂ ಭವಿಷ್ಯ ನುಡಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT