ಟೀಕೆಯ ರಾಜಕಾರಣ ಮಾಡೋದಿಲ್ಲ: ಪ್ರಜ್ವಲ್ ರೇವಣ್ಣ

ಗುರುವಾರ , ಏಪ್ರಿಲ್ 25, 2019
33 °C
ಸಿದ್ದರಾಮಯ್ಯ, ಪರಮೇಶ್ವರ್ ಭೇಟಿ ಮಾಡಿದ

ಟೀಕೆಯ ರಾಜಕಾರಣ ಮಾಡೋದಿಲ್ಲ: ಪ್ರಜ್ವಲ್ ರೇವಣ್ಣ

Published:
Updated:

ಬೆಂಗಳೂರು: ಹಾಸನ ಕ್ಷೇತ್ರದಿಂದ ಜೆಡಿಎಸ್‌ –ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿ ಸಿದ್ದರಾಮಯ್ಯನವರ ಆಶೀರ್ವಾದ ಪಡೆದರು

ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, ನಾವು ಸಣ್ಣವರಿದ್ದಾಗಿಂದಲೂ ಸಿದ್ದರಾಮಯ್ಯನವರನ್ನು ನೋಡಿಕೊಂಡು ಬೆಳೆದವರು. ನಮ್ಮ ಮನೆಯವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಿದ್ದೇನೆ. ಸಿದ್ದರಾಮಯ್ಯ ಅವರು ಕಡೂರು, ಅರಕಲಗೂಡು, ಅರಸಿಕೆರೆ ಹಾಸನಕ್ಕೆ ಚುನಾವಣಾ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.‌

ಹಾಸನದಲ್ಲಿ ಎ ಮಂಜು ನಾಮಿನೇಷನ್‌ಗೆ ಜನ ಸೇರಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್, ‘ಎ ಮಂಜು ಬಗ್ಗೆ ನನಗೆ ಭಯ ಇಲ್ಲ. ನಾನು ಎಂದಾದರೂ ಎ ಮಂಜು ವಿರುದ್ದ ಮಾತನಾಡಿದ್ದು ಕೇಳಿದ್ದೀರಾ. ಟೀಕೆಯ ರಾಜಕಾರಣ ಮಾಡೋದಿಲ್ಲ.

₹400, ₹500 ರೂಪಾಯಿ ಕೊಟ್ಟರೆ ಜನ ಸೇರಿಸೋದು ದೊಡ್ಡದಲ್ಲ. ಹಾಗೇನಾದರೂ ದುಡ್ಡು ಕೊಟ್ಟರೆ ನಾವು ಹಾಸನ ಜಿಲ್ಲೆ ತುಂಬಾ ಜನ ಸೇರಿಸ್ತೇವೆ.‌ ನಾನು ಈಗ ತಾನೇ ಪ್ರಚಾರಕ್ಕೆ ಬರ್ತಿದ್ದೀನಿ. ಹೀಗಾಗಿ ಎಲ್ಲರ ಆಶೀರ್ವಾದ ತೆಗೆದುಕೊಂಡರೆ ಗೆಲ್ಲುವುದಕ್ಕೆ ಒಳ್ಳೆಯದು. ಹಾಸನ ಕಾಂಗ್ರೆಸಿಗರೆಲ್ಲರೂ ಒಟ್ಟಾಗಿ ನನಗೆ ಬೆಂಬಲ ಕೊಡ್ತಿದ್ದಾರೆ ಎಂದರು. 

ಪರಮೇಶ್ವರ್ ಭೇಟಿಯಾದ ಪ್ರಜ್ವಲ್ ರೇವಣ್ಣ

ಇನ್ನು ಬಿಎಂಆರ್ ಡಿಎಲ್ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿಯಾಗಿ ತಮ್ಮನ್ನು ಬೆಂಬಲಿಸುವಂತೆ ಹಾಗೂ ಹಾಸನ ಕೈ ಅಸಮಾಧಾನ ತಣಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !