ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಪ್ರಕಾಶ್ ರೈ

7
ಟ್ವಿಟರ್‌ನಲ್ಲಿ ಘೋಷಣೆ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಪ್ರಕಾಶ್ ರೈ

Published:
Updated:

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ನಟ ಪ್ರಕಾಶ್ ರೈ ಘೋಷಿಸಿದ್ದಾರೆ.

ಹೊಸ ವರ್ಷದ ಸಂದರ್ಭದಲ್ಲಿ, ಸೋಮವಾರ ಮಧ್ಯರಾತ್ರಿ ಟ್ವೀಟ್ ಮಾಡಿರುವ ಅವರು, ‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಒಂದು ಹೊಸ ಆರಂಭ. ಹೆಚ್ಚಿನ ಜವಾಬ್ದಾರಿ. ನಿಮ್ಮ ಬೆಂಬಲದೊಂದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಸ್ಪರ್ಧಿಸಲಿರುವ ಕ್ಷೇತ್ರದ ಕುರಿತ ಮಾಹಿತಿಯನ್ನು ಶೀಘ್ರದಲ್ಲೇ ನೀಡಲಿದ್ದೇನೆ. ಆಬ್‌ ಕಿ ಬಾರ್ ಜನತಾ ಕಿ ಸರ್ಕಾರ್. #citizensvoice #justasking’ ಎಂದು ಬರೆದಿದ್ದಾರೆ.

ಇದರೊಂದಿಗೆ ರಜನಿಕಾಂತ್, ಕಮಲಹಾಸನ್ ನಂತರ ಸಕ್ರಿಯ ರಾಜಕೀಯಕ್ಕೆ ಧುಮುಕುತ್ತಿರುವ ಮೂರನೇ ಪ್ರಮುಖ ನಟರಾಗಿದ್ದಾರೆ ಪ್ರಕಾಶ್ ರಾಜ್.

2017ರ ನವೆಂಬರ್‌ನಲ್ಲಿ ಜಸ್ಟ್‌ ಆಸ್ಕಿಂಗ್ ಅಭಿಯಾನವನ್ನು ಅವರು ಹಮ್ಮಿಕೊಂಡಿದ್ದರು. ‘ಸಾಮಾಜಿಕ ಮಾಧ್ಯಮಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಸಲುವಾಗಿ ನಡೆಯುವ ಟ್ರೋಲ್ ಗೂಂಡಾಗಿರಿ ವಿರೋಧಿಸಿ ಜಸ್ಟ್‌ ಆಸ್ಕಿಂಗ್ ಎಂಬ ಪ್ರತಿಭಟನಾ ಸ್ವರೂಪದ ಅಭಿಯಾನ ಆರಂಭಿಸಿದ್ದೇನೆ’ ಎಂದು ಅವರು ಆಗ ತಿಳಿಸಿದ್ದರು.

ಇದನ್ನೂ ಓದಿ: ಗ್ರಾಮಸ್ಥರಿಗೆ ಶುದ್ಧ ನೀರು ಒದಗಿಸಿದ ಪ್ರಕಾಶ್ ರೈ

ಪ್ರಕಾಶ್ ರೈ ಅವರು ‘ಪ್ರಕಾಶ್ ರಾಜ್ ಫೌಂಡೇಷನ್’ ಮೂಲಕ ಸಮಾಜ ಸೇವಾ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಚಿತ್ರದುರ್ಗ ಸಮೀಪದ ಬಂಡ್ಲೋರಹಟ್ಟಿ ಗ್ರಾಮವನ್ನು ದತ್ತು ಪಡೆದಿದ್ದಾರೆ.

ಇನ್ನಷ್ಟು...
* ಪ್ರಧಾನಿ ನರೇಂದ್ರ ಮೋದಿ ನನಗಿಂತ ದೊಡ್ಡ ನಟ: ಪ್ರಕಾಶ್ ರೈ ವ್ಯಂಗ್ಯ
* ಮೋದಿ, ಅಮಿತ್‌ ಷಾ, ಅನಂತಕುಮಾರ ಹೆಗಡೆ ಹಿಂದೂಗಳಲ್ಲ: ಪ್ರಕಾಶ್ ರೈ
* ‘ಅವರವರ ಭಾವಕ್ಕೆ’ ಪುಸ್ತಕ ಬಿಡುಗಡೆ

ಬರಹ ಇಷ್ಟವಾಯಿತೆ?

 • 42

  Happy
 • 4

  Amused
 • 3

  Sad
 • 1

  Frustrated
 • 23

  Angry

Comments:

0 comments

Write the first review for this !